ನವದೆಹಲಿ: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಕುಟುಂಬಸ್ಥರನ್ನು ಭೇಟಿ ಮಾಡಿದ ನಾಯಕರ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಕಿಡಿಕಾರಿದ್ದಾರೆ.
1984ರ ಸಿಖ್ ದಂಗೆ ಪ್ರಕರಣಕ್ಕೆ ಸಂಬಂಧಿಸಿ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್ ಕುಮಾರ್ ಅವರು ಆಗಸ್ಟ್ 20 ರಂದು ಮೃತಪಟ್ಟಿದ್ದರು.
ಆ ಬಳಿಕ ಬಿಜೆಪಿಯ ಕೆಲವು ನಾಯಕರು ಅವರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಈ ಸಂಬಂಧ ನಿತಿನ್ ನವೀನ್ ಅವರು ಪಕ್ಷದ ನಾಯಕರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ನಿತಿನ್ ನವೀನ್ ಅವರು ಸಂಸದರಿಂದ ವಿವರಣೆ ಕೇಳಿದ್ದಾರೆ.
'ಸಜ್ಜನ್ ಕುಮಾರ್ ಕುಟುಂಬಸ್ಥರ ಭೇಟಿ ವೈಯಕ್ತಿಕ ನಿರ್ಧಾರವಾಗಿದೆ. ಅದನ್ನು ಪಕ್ಷದ ನಿಲುವು ಎಂದು ಅರ್ಥೈಸಬಾರದು' ಎಂದು ಕಾರ್ಯಕರ್ತರೊಬ್ಬರು ವಿವರಣೆ ನೀಡಿದ್ದಾರೆ.
ನಮ್ಮ ಪಕ್ಷ ಎಂದಿಗೂ ಅಪಾರಾಧಿಗಳ ಪರ ನಿಲ್ಲುವುದಿಲ್ಲ. ಆದರೆ ಸಜ್ಜನ್ ಕುಮಾರ್ ಕುಟುಂಬಸ್ಥರ ಭೇಟಿಯು ಸಿಖ್ ಸಮುದಾಯಗಳಲ್ಲಿ ಭಾರಿ ಟೀಕೆಗೆ ಕಾರಣವಾಗಿದೆ ಎಂದು ಬಿಜೆಪಿ ಹೇಳಿದೆ.

