HEALTH TIPS

ಇಂದು ಮಾದಕವಸ್ತು ವಿರುದ್ಧ ಹಾರ್ಲೆ-ಡೇವಿಡ್ಸನ್ ಮೋಟಾರ್ ಸೈಕಲ್ ರ್ಯಾಲಿ

ಕಾಸರಗೋಡು: ಮಾದಕವಸ್ತು ಬಳಕೆ ವಿರುದ್ಧ ಜಾಗೃತಿ ಮೂಡಿಸಲು ಹಾರ್ಲೆ-ಡೇವಿಡ್ಸನ್ ಮೋಟಾರ್ ಸೈಕಲ್ ರ್ಯಾಲಿ ಆ. 8ರಂದು ಬೇಕಲದಿಂದ ಆರಂಭಗೊಂಡು ಜಿಲ್ಲೆಯ ವಿವಿಧೆಡೆ ಪರ್ಯಟನೆ ನಡೆಸಲಿದೆ. ಕೇರಳ ಸರ್ಕಾರದ ಮಾದಕವಸ್ತು ವಿರೋಧಿ ಅಭಿಯಾನ 'ಆಪರೇಷನ್ ತೂಫಾನ್-ದಿ ನಾರ್ಕೋ ಹಂಟ್' ಸಹಯೋಗದೊಂದಿಗೆ ಈ ಬೃಹತ್ ಬೈಕ್ ರ್ಯಾಲಿ ಆಯೋಜಿಸಲಾಗುತ್ತಿದೆ ಎಂದು ಚಂದ್ರಗಿರಿ ಲಯನ್ಸ್ ಕ್ಲಬ್ ಅಧ್ಯಕ್ಷ ಶಾಫಿ ನಲಪ್ಪಾಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೇರಳದಲ್ಲಿ ಇದೇ ಮೊದಲ ಬಾರಿಗೆ 150 ಹಾರ್ಲೆ-ಡೇವಿಡ್ಸನ್ ಮೋಟಾರ್‍ಸೈಕಲ್‍ಗಳು ಭಾಗವಹಿಸುವ ರ್ಯಾಲಿ ನಡೆಸಲಾಗುತ್ತಿದೆ.  


ಚಂದ್ರಗಿರಿ ಲಯನ್ಸ್ ಕ್ಲಬ್‍ನ ನೇತೃತ್ವದಲ್ಲಿ, ಕಾಸರಗೋಡು ಜಿಲ್ಲಾ ಪೆÇಲೀಸ್ ಮತ್ತು ಸದರ್ನ್ ಹಾರ್ಲೆ ಓನರ್ಸ್ ಗ್ರೂಪ್ (ಟಸ್ಕರ್ ಚಾಪ್ಟರ್, ಬೆಂಗಳೂರು) ಸಹಯೋಗದೊಂದಿಗೆ ಈ ಐತಿಹಾಸಿಕ ರ್ಯಾಲಿಯನ್ನು ಆಯೋಜಿಸಲಾಗುತ್ತಿದೆ. ನಮ್ಮ ನಾಡಿನಲ್ಲಿ ಮಾದಕವಸ್ತು ಮಾಫಿಯಾಗೆ ಯಾವುದೇ ಸ್ಥಾನವಿಲ್ಲ ಎಂದು ಬಲವಾಗಿ ಸಾರುವ ಈ ರ್ಯಾಲಿಯು, ಯುವ ಪೀಳಿಗೆಯ ಭವಿಷ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಒಂದು ಜನಚಳುವಳಿಯಾಗಿ ರೂಪುಗೊಳ್ಳಲಿದೆ.

ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನಿತಿನ್ ರಾಜ್ ಐಪಿಎಸ್ ಅವರು   ಆಗಸ್ಟ್ 8ರಂದು ಬೆಳಗ್ಗೆ 10ಕ್ಕೆ ಬೆಕಲ್ ತಾಜ್ ಗೇಟ್‍ವೇಯಲ್ಲಿ ರ್ಯಾಲಿಗೆ ಚಾಲನೆ ನೀಡುವರು. ರ್ಯಾಲಿ ಪಾಲಕುನ್ನು, ಉದುಮ, ಮೇಲ್ಪರಂಬ, ಹಳೇ ಪ್ರೆಸ್‍ಕ್ಲಬ್ ಜಂಕ್ಷನ್, ಕರಂದಕ್ಕಾಡ್, ಹೊಸಬಸ್ ನಿಲ್ದಾಣ, ಎಂ.ಜಿ ರಸ್ತೆಮೂಲಕ ಬೇಕಲ್ ಬೀಚ್ ಪಾರ್ಕಿನಲ್ಲಿ gಸಮಾರೋಪಗೊಳ್ಳುವುದಾಘಿ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಶಾಫಿ ನೆಲ್ಲಿಕುನ್ನು, ಡಾ. ಸಿ.ಟಿ. ಮುಸ್ತಫಾ,  ಫಾರೂಕ್ ಕಾಸ್ಮಿ, ಹಾರ್ಲೆ-ಡೇವಿಡ್ಸನ್ ಟಸ್ಕರ್‍ನ ಕುಮಾರ್ ರೆಡ್ಡಿ, ಮುಹಮ್ಮದ್ ಅಸೀಮ್, ಶರೀಫ್ ಕಪ್ಪಿಲ್, ಅನಸ್, ಆಶುಧರ್, ನಸ್ನೀನ್ ಮತ್ತು ತಸ್ನೀಸ್ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries