ಪೆರ್ಲ: ಎಣ್ಮಕಜೆ ಪಂಚಾಯಿತಿ ಪೆರ್ಲದಿಂದ ಪೂವನಡ್ಕ ತೆರಳುವ ಲೋಕೋಪಯೋಗಿ ಇಲಾಖೆ ಅಧೀನದ ರಸ್ತೆ, ಪೆರ್ಲ ಸನಿಹ ಶ್ರೀ ಅಯ್ಯಪ್ಪ ಮಂದಿರ ವಠಾರದಲ್ಲಿ ಕುಸಿತಕ್ಕೀಡಾದ ಪ್ರದೇಶವನ್ನು ದುರಸ್ತಿಗೊಳಿಸಲಾಗಿದೆ.
ಲೋಕೋಪಯೋಗಿ ಇಲಾಖೆ ಬದಿಯಡ್ಕ ವಿಭಾಗೀಯ ಕಚೇರಿ ಸಹಾಯಕ ಅಭಿಯಂತರ ಮಧ್ಯಪ್ರವೇಶದಿಂದ ಜಲಪ್ರಾಧಿಕಾರ ಅಧಿಕಾರಿಗಳು ದುರಸ್ತಿಕಾರ್ಯ ನಡೆಸಿದ್ದಾರೆ.
ಜಲಪ್ರಾಧಿಕಾರ ಕುಡಿಯುವ ನೀರು ವಿತರಣೆಗಾಗಿ ಅಳವಡಿಸಿದ ಪೈಪು ಒಡೆದು ಭಾರೀ ಪ್ರಮಾಣದಲ್ಲಿ ನೀರು ಹೊರಬಂದಿರುವುದರಿಂದ ರಸ್ತೆ ಕುಸಿಯಲು ಕಾರಣವಾಗಿತ್ತು. ಇದರಿಂದ ವಾಹನಸಂಚಾರಕ್ಕೆ ಸಮಸ್ಯೆ ಉಂಟಾಗಿದ್ದ ಹಿನ್ನೆಲೆಯಲ್ಲಿ ತಕ್ಷಣ ರಸ್ತೆದುರಸ್ತಿ ನಡೆಸಿಕೊಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಲಪ್ರಾಧಿಕಾರಕ್ಕೆ ಸೂಚನೆ ನೀಡಿದ್ದರು.


