ಕಾಸರಗೋಡು: ಪರಿಸರ ಸ್ನೇಹಿ ರಾಸಾಯನಿಕ ಉತ್ಪಾದನೆ ಮತ್ತು ಕನಿಷ್ಠ ತ್ಯಾಜ್ಯದೊಂದಿಗೆ ಇಂಧನ ಉತ್ಪಾದನೆಗೆ ಸಹಕಾರಿಯಾಗುವ ವೇಗವರ್ಧಕವನ್ನು (ಛಿಚಿಣಚಿಟಥಿsಣ) ತಯಾರಿಸುವ ಹೊಸ ವಿಧಾನವೊಂದನ್ನು ಅಭಿವೃದ್ಧಿಪಡಿಸಿರುವ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಕ್ಯಾಂಪಸ್‍ನ ಸಂಶೋಧಕರಿಗೆ ಪೇಟೆಂಟ್ ಲಭ್ಯವಾಗಿದೆ.
ಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎ. ಶಕ್ತಿವೇಲ್, ಸಹ-ಸಂಶೋಧಕರಾದ ನಿಮಿಷಾ ಎನ್.ಪಿ. ಮತ್ತು ಡಾ. ಸೌಮ್ಯ ಬಿ.ಎನ್. ಅವರಿಗೆ ಈ 'ತಯಾರಿಕಾ ವಿಧಾನ'ಕ್ಕಾಗಿ ಪೇಟೆಂಟ್ ನೀಡಲಾಗಿದೆ. 'Iಖಿಕಿ-2 ಒeಣಚಿಟ ಔxಥಿ-ಊಥಿಜಡಿoxiಜe ಅomಠಿosiಣe ಒಚಿಣeಡಿiಚಿಟs ಖಿheಡಿeoಜಿ' (ಭಾರತೀಯ ಪೇಟೆಂಟ್ ಸಂಖ್ಯೆ 596368) ಎಂಬ ಶೀರ್ಷಿಕೆಯ ಆವಿಷ್ಕಾರಕ್ಕಾಗಿ ಈ ಗೌರವ ನೀಡಲಾಗಿದೆ. ಈ ತಂತ್ರಜ್ಞಾನವು ರಾಸಾಯನಿಕ ಪ್ರಕ್ರಿಯೆಗಳ ದಕ್ಷತೆಯನ್ನು ಹೆಚ್ಚಿಸುವ ಜೊತೆಗೆ, ಪರಿಸರ ಸ್ನೇಹಿ ಉತ್ಪಾದನಾ ವಿಧಾನಗಳಿಗೆ ಬೆಂಬಲ ನೀಡುವ ಸಾಮಥ್ರ್ಯವನ್ನು ಹೊಂದಿದೆ. ಕನಿಷ್ಠ ಪ್ರಮಾಣದ ರಾಸಾಯನಿಕ ತ್ಯಾಜ್ಯದೊಂದಿಗೆ ಇಂಧನಗಳು ಮತ್ತು ಮೌಲ್ಯಯುತ ರಾಸಾಯನಿಕಗಳ ಉತ್ಪಾದನೆಗೆ ಅನುವು ಮಾಡಿಕೊಡುವ ಮೂಲಕ, ಈ ಆವಿಷ್ಕಾರವು ವಿವಿಧ ಸಾಧ್ಯತೆಗಳ ಹೊಸ ಲೋಕವನ್ನೇ ತೆರೆದಿಡುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಪೇಟೆಂಟ್ ಪಡೆದ ಸಂಶೋಧನಾ ತಂಡವನ್ನು ವಿಶ್ವ ವಇದ್ಯಾಲಯ ಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಅಭಿನಂದಿಸಿದ್ದಾರೆ. ಇದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ಸಂಶೋಧಕರಲ್ಲಿ ಮುಂದಿನ ಹಂತಕ್ಕೆ ಸಾಗಲು ಆತ್ಮವಿಶ್ವಾಸ ತುಂಬುವ ಸಾಧನೆಯಾಗಿದೆ ಎಂದು ತಿಳಿಸಿದ್ದಾರೆ.



