HEALTH TIPS

ಪ್ರೀತಿಯ ಪಯಣದಲ್ಲಿ ಅವಳಿಗಳ ಸಮ್ಮಿಲನ; ಮದುವೆ ಮಾಡಿಸಿದ ಪಾದ್ರಿಗಳೂ ಅವಳಿಗಳು...

ಕೊಟ್ಟಾಯಂ: ಮದುವೆ ಎಂದರೆ ಎರಡು ಜೀವಗಳ ಸಮ್ಮಿಲನವಲ್ಲ, ಅದು ಭಾವನೆಗಳ ಬಣ್ಣದ ಲೋಕ. ಈ ಅನಂತ ಪ್ರೀತಿಯ ಕಾವ್ಯದಲ್ಲಿ ಅವಳಿಗಳ ವಿವಾಹ ಸಂಭ್ರಮದಿಂದ ನಡೆಯಿತು. 


ಕೆಲವು ಮದುವೆಗಳು ಅದ್ದೂರಿಯಿಂದ ನೆನಪಿನಲ್ಲಿ ಉಳಿಯುತ್ತವೆ. ಆದರೆ ಈ ಅವಳಿಗಳ ಮದುವೆ ಅತ್ಯಂತ ಅಪರೂಪದ ಕಾರಣಕ್ಕಾಗಿ ಸದಾ ನೆನಪಿನಲ್ಲಿ ಉಳಿಯುವಂತದ್ದು.

ಏಕೆಂದರೆ ಈ ಮದುವೆಯ ವಿಧಿವಿಧಾನಗಳನ್ನು ಪೂರೈಸಿದ ಪಾದ್ರಿಗಳು, ಅವರಿಗೆ ನೆರವಾದವರು ಕೂಡ ಅವಳಿಗಳು ಎಂಬುದು ವಿಶೇಷ.

ಕೇರಳದ ಚಂಗನಾಶ್ಶೇರಿಯ ಮೆಟ್ರೋಪಾಲಿಟನ್ ಚರ್ಚ್‌ನಲ್ಲಿ ಈ ಮದುವೆ ನಡೆಯಿತು. ಅವಳಿಗಳಾದ ಅಖಿಲ್ ಮತ್ತು ನಿಖಿಲ್ ಥಾಮಸ್ ಅವರು ಮ್ಯಾಗಿ ಮತ್ತು ಮರಿಯಾ ಥಾಮಸ್ ಅವಳಿಗಳನ್ನು ವರಿಸಿದರು. ಈ ಅಪರೂಪದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದ್ದು ಅವಳಿ ಧರ್ಮಗುರುಗಳು ಹಾಗೂ ಅವರಿಗೆ ನೆರವಾದವರು ಅವಳಿ ಬಾಲಕರು.

ಆದ್ದರಿಂದ ಎರಡು ಕುಟುಂಬಗಳಿಗೆ ಇದು ಬರಿ ಮದುವೆಯಾಗಿರಲಿಲ್ಲ; ಹಲವು ವರ್ಷಗಳಿಂದ ಮನಸ್ಸಿನಲ್ಲಿ ಪೋಷಿಸಿಕೊಂಡು ಬಂದಿದ್ದ ಕನಸು ಸಾಕಾರವಾಗಿತ್ತು.

ಚಿಕ್ಕಂದಿನಿಂದಲೂ ನಮ್ಮ ಸುತ್ತಲೂ ಅವಳಿ-ಜವಳಿಗಳೇ ಇರುವ ವಾತಾವರಣದಲ್ಲಿ ಮದುವೆಯಾಗಬೇಕೆಂಬ ಕನಸಿತ್ತು. ನಮ್ಮ ಪೋಷಕರು ಮತ್ತು ಕುಟುಂಬಸ್ಥರ ಆಸೆಯೂ ಇದೇ ಆಗಿತ್ತು. ಏಸು ಪ್ರಭು ಈ ಕನಸನ್ನು ನನಸು ಮಾಡಿದ್ದಾರೆ ಎಂದು ವಧುಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಧರ್ಮಗುರುಗಳೂ ಸಹ ಈ ಘಟನೆಯನ್ನು ಜೀವಮಾನದ ನೆನಪು ಎಂದು ಬಣ್ಣಿಸಿದ್ದಾರೆ. ಅವಳಿಗಳಿಗೆ ಮದುವೆ ಮಾಡಿಸಿದ್ದು ಅತ್ಯಂತ ವಿಶೇಷ ಅನುಭವ ಮತ್ತು ಸುಂದರ ನೆನಪು ಎಂದು ಸುದ್ದಿ ವಾಹಿನಿಯೊಂದಕ್ಕೆ ಅವರು ತಿಳಿಸಿದ್ದಾರೆ.

ಅಖಿಲ್ ಮತ್ತು ನಿಖಿಲ್ ನೌಕಪಡೆಯಲ್ಲಿ ಉದ್ಯೋಗಿಗಳಾಗಿದ್ದರೆ, ವಧುಗಳಾದ ಮ್ಯಾಗಿ ಮತ್ತು ಮರಿಯಾ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries