ಕಾಸರಗೋಡು: ಮುಡಿಪು ಶ್ರೀಭಾರತಿ ವಿದ್ಯಾ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಗಡಿನಾಡು ಕಾಸರಗೋಡಿನ ಖ್ಯಾತ ಕನ್ನಡ ಸಂಸ್ಥೆ ರೂವಾರಿ ಡಾ. ವಾಮನ್ ರಾವ್ ಬೇಕಲ್-ಸಂದ್ಯಾ ರಾಣಿ ದಂಪತಿಗಳಿಗೆ "ಚೈತನ್ಯ ಶ್ರೀ " ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಿ. ವಿ. ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಸಾಹಿತ್ಯ ವೇದಿಕೆ ಮತ್ತು ಕಥಾಬಿಂದು ಪ್ರಕಾಶನದ ನೇತೃತ್ವದಲ್ಲಿ ನಡೆದ ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಮ್ಮೇಳನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಧರ್ಮದರ್ಶಿ ಮಾಜಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನಃರೂರ್ ಅದ್ಯಕ್ಷತೆ ವಹಿಸಿದ್ದರು.
ಕಥಾಬಿಂದು ಪಿ. ವಿ. ಪ್ರದೀಪ್ ಕುಮಾರ್, ಡಾ. ಕೊಲಚಪ್ಪೆ ಗೋವಿಂದ ಭಟ್. ಹಿರಿಯ ಸಾಹಿತಿ ಕೆ. ವಿ ಲಕ್ಷ್ಮಣ ಮೂರ್ತಿ, ಶ್ರೀ ಸುಬ್ರಹ್ಮಣ್ಯ ಭಟ್ ಕೊಡಕ್ಕಲ್ ಮುಂತಾದವರಿದ್ದರು.


