ಕೀವ್ (AFP): ನಾವು ರಷ್ಯಾ ವಿರುದ್ಧ ಹೋರಾಡುತ್ತಿದ್ದು, ಯುದ್ಧದ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಒಂದು ದೊಡ್ಡ ಅಪಾಯ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
ಸೇನೆ ಕಾನೂನಿನ ಅಡಿಯಲ್ಲಿ ಉಕ್ರೇನ್, ಚುನಾವಣೆಯನ್ನು ಅನಿಶ್ಚಿತ ಅವಧಿಗೆ ಮುಂದೂಡಿದೆ. 2019ರಲ್ಲಿ ನಡೆದ ಚುನಾವಣೆಯಲ್ಲಿ ಝೆಲೆನ್‌ಸ್ಕಿ ಅವರು ಆಯ್ಕೆಯಾಗಿದ್ದಾರೆ.
ದೇಶದಲ್ಲಿ ಚುನಾವಣೆ ನಡೆಸಬೇಕೆಂದು ಮಾಜಿ ರಕ್ಷಣಾ ಸಚಿವ ಮೈಖಾಯ್ಲೊ ಫೆಡೊರೊವ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಝೆಲೆನ್‌ಸ್ಕಿ 'ದೇಶವನ್ನು ನಾಶ ಮಾಡಲು ನಾವು ಬಯಸಿದರೆ, ಈ ಸಂದರ್ಭದಲ್ಲಿ ಚುನಾವಣೆ ನಡೆಸಬಹುದು. ಈಗಿನ ಚುನಾವಣೆಯು ದೇಶವನ್ನು ವಿಭಜಿಸುವ ಸುನಾಮಿಯಂತೆ' ಎಂದಿದ್ದಾರೆ.
'ಸೈನಿಕರು, ಲಕ್ಷಾಂತರ ನಿರಾಶ್ರಿತರು, ಆಕ್ರಮಿತ ಪ್ರದೇಶಗಳ ಜನರು ಹೇಗೆ ಮತ ಚಲಾಯಿಸುತ್ತಾರೆ? ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪ ಹಾಗೂ ದಾಳಿಯ ಬೆದರಿಕೆಯೂ ಇದೆ' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಉಕ್ರೇನ್‌ನ ಶೇ 15 ಜನರು ಮಾತ್ರವೇ ಯುದ್ಧ ಮುಗಿಯುವ ಮುನ್ನ ಚುನಾವಣೆ ನಡೆಯಬೇಕು ಎಂದು ಬಯಸುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

