HEALTH TIPS

ಭಾರತ- ಚೀನಾ ವಿಶೇಷ ಪ್ರತಿನಿಧಿಗಳ ಸಭೆ ನಾಳೆ

ಬೀಜಿಂಗ್‌ (PTI): ಭಾರತ- ಚೀನಾ ವಿಶೇಷ ‍ಪ್ರತಿನಿಧಿಗಳ ಮಾತುಕತೆ ಮಂಗಳವಾರ ನಡೆಯಲಿದೆ. 

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರು ಬೀಜಿಂಗ್‌ಗೆ ಸೋಮವಾರ ತೆರಳಲಿದ್ದು, ಚೀನಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ವಾಂಗ್‌ ಯಿ ಅವರೊಂದಿಗೆ 25ನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ. 


3,488 ಕಿ.ಮೀ ಉದ್ದದ ಭಾರತ- ಚೀನಾ ಗಡಿ ವಿವಾದವನ್ನು ಸಂಪೂರ್ಣವಾಗಿ ಬಗೆಹರಿಸಲು ಮಾತುಕತೆಗಾಗಿ ವಿಶೇಷ ಪ್ರತಿನಿಧಿ ಗಳನ್ನು ನಿಯೋಜಿಸುವ ವ್ಯವಸ್ಥೆಯನ್ನು2003ರಲ್ಲಿ ಆರಂಭಿಸಲಾಯಿತು. ಡೊಭಾಲ್‌ ಮತ್ತು ವಾಂಗ್‌ ಯಿ ಅವರು ಈಗ ನೇಮಕವಾಗಿರುವ ವಿಶೇಷ ಪ್ರತಿನಿಧಿಗಳು.

ಗಡಿ ವಿವಾದವನ್ನು ಸಂಪೂರ್ಣವಾಗಿ ಬಗೆಹರಿಸಲು ಸಾಧ್ಯವಾಗದೇ ಇದ್ದರೂ ಉಭಯ ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಪರಿಹರಿ ಸುವಲ್ಲಿ ಶಮನ ಮಾಡುವಲ್ಲಿ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗುತ್ತದೆ.

ಸೆಪ್ಟೆಂಬರ್ 12-13ರಂದು ಭಾರತದಲ್ಲಿ ನಡೆಯಲಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಷಿ-ಜಿನ್‌ಪಿಂಗ್‌ ಭಾಗಿಯಾಗುವ ನಿರೀಕ್ಷೆ ಇದೆ.

ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹೇಳಿಕೊಳ್ಳುತ್ತದೆ. ಆದರೆ 'ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಚೀನಾದ ನಡೆ ವ್ಯರ್ಥ ಮತ್ತು ಅಸಂಬದ್ಧ' ಎಂದು ಭಾರತ ಪ್ರತಿಕ್ರಿಯಿಸಿದೆ.

ಅರುಣಾಚಲ ಪ್ರದೇಶದ ಸುಬಾನ್ಸಿರಿ ಪ್ರದೇಶದಲ್ಲಿ ಚೀನಾ ಪಡೆಗಳು ಇತ್ತೀಚೆಗೆ ಪ್ರಚೋದನಕಾರಿಯಾಗಿ ವರ್ತಿಸಿವೆ ಎಂದು ವರದಿಯಾಗಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries