HEALTH TIPS

ಎಸ್‌ಐಆರ್: ಮಾಜಿ ರಾಯಭಾರಿಗೆ ಪೌರತ್ವ ಸಾಬೀತು ಪಡಿಸಲು ದಾಖಲೆ ಕೇಳಿದ ಚುನಾವಣಾ ಆಯೋಗ

ನವದೆಹಲಿ:  ಪಂಜಾಬ್‌ನಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಮಾಜಿ ರಾಜತಾಂತ್ರಿಕ ಅಧಿಕಾರಿ ನವದೀಪ್ ಸೂರಿ ಸೇರಿದಂತೆ ಹಲವರ ಪೌರತ್ವ ದಾಖಲೆಗಳನ್ನು ಚುನಾವಣಾ ಆಯೋಗ ಕೇಳುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. 


ಮಾಜಿ ರಾಯಭಾರಿಯ ಪೌರತ್ವವನ್ನು ಏಕೆ ಪ್ರಶ್ನಿಸಲಾಗುತ್ತಿದೆ?

2003ರ ಮತದಾರರ ಪಟ್ಟಿಯ ವಿವರಗಳು ಈಗಿನ ಆಧಾರ್ ಮತ್ತು ಗುರುತಿನ ಚೀಟಿಯೊಂದಿಗೆ ಹೊಂದಾಣಿಕೆಯಾಗದ ಕಾರಣ, ಪೌರತ್ವ ಸಾಬೀತುಪಡಿಸಲು ದಾಖಲೆಗಳನ್ನು ಸಲ್ಲಿಸುವಂತೆ ನವದೀಪ್ ಸೂರಿಗೆ ನೋಟಿಸ್ ನೀಡಲಾಗಿದೆ.


ಚುನಾವಣಾ ಆಯೋಗದ ಈ ಪ್ರಕ್ರಿಯೆಯ ಬಗ್ಗೆ ಆಕ್ಷೇಪವೇನು?

ಉನ್ನತ ಮಟ್ಟದ ರಾಜತಾಂತ್ರಿಕ ಸೇವೆಯನ್ನು ಸಲ್ಲಿಸಿದ ವ್ಯಕ್ತಿಗಳಿಗೇ ಇಂತಹ ಪರಿಸ್ಥಿತಿ ಎದುರಾದರೆ, ಸಾಮಾನ್ಯ ನಾಗರಿಕರ ಗತಿ ಏನು ಎಂದು ನವದೀಪ್ ಸೂರಿ ಪ್ರಶ್ನಿಸಿದ್ದಾರೆ.


ಪಿ. ಚಿದಂಬರಂ ಅವರು ವ್ಯಕ್ತಪಡಿಸಿರುವ ಕಳವಳವೇನು?

ಈ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ದೇಶದಲ್ಲಿ ಸುಮಾರು 10 ಕೋಟಿ ಮಂದಿಯನ್ನು ಮತದಾನದ ಹಕ್ಕಿಲ್ಲದ ನಾಗರಿಕರನ್ನಾಗಿ ಪರಿವರ್ತಿಸುವ ಅಪಾಯವಿದೆ ಎಂದು ಚಿದಂಬರಂ ಎಚ್ಚರಿಸಿದ್ದಾರೆ.


ಪೌರತ್ವ ಸಾಬೀತುಪಡಿಸಲು ಕೇಳಲಾಗುತ್ತಿರುವ ದಾಖಲೆಗಳು ಯಾವುವು?

ಆಧಾರ್ ಮತ್ತು ಮತದಾರರ ಗುರುತಿನ ಚೀಟಿಗಳ ಹೊರತಾಗಿ, ಹಳೆಯ ದಾಖಲೆಗಳು ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ಅನ್ನು ಪುರಾವೆಯಾಗಿ ಸಲ್ಲಿಸುವಂತೆ ಆಯೋಗ ಸೂಚಿಸಿದೆ.

ಪ್ರಮುಖ ಅಂಕಿಅಂಶಗಳು

10 ಕೋಟಿಮತದಾನದ ಹಕ್ಕು ಕಳೆದುಕೊಳ್ಳಬಹುದಾದ ಜನರ ಅಂದಾಜು ಸಂಖ್ಯೆ2003ಹೋಲಿಕೆ ಮಾಡಲಾದ ಮತದಾರರ ಪಟ್ಟಿಯ ವರ್ಷ

2003ರ ಮತದಾರರ ಪಟ್ಟಿಯಲ್ಲಿರುವ ವಿವರಗಳು ಮತ್ತು ಈಗಿನ ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿದ್ದು, ದಾಖಲೆಗಳನ್ನು ಕೇಳಲಾಗಿದೆ ಎಂದು ಅವರು 'ಎಕ್ಸ್'ನಲ್ಲಿ ಮಾಹಿತಿ ನೀಡಿದ್ದಾರೆ.

'ಮತದಾರರ ಗುರುತಿನ ಚೀಟಿ ಮತ್ತು ಆಧಾರ್‌ ಕಾರ್ಡ್‌ ಅನ್ನು ಬೂತ್‌ ಮಟ್ಟದ ಅಧಿಕಾರಿಗೆ (ಬಿಎಲ್‌ಒ) ಸಲ್ಲಿಸಿದ್ದೇನೆ. ಆರಂಭದಲ್ಲಿ ಎಲ್ಲವೂ ಸರಿಯಾಗಿದೆ ಎಂದು ತಿಳಿಸಲಾಗಿತ್ತು. ಬಳಿಕ 2003ರ ಎಸ್‌ಐಆರ್ ದಾಖಲೆಗಳೊಂದಿಗೆ ಕೆಲವು ವಿವರಗಳು ಹೊಂದಿಕೆಯಾಗುತ್ತಿಲ್ಲ ಎಂದು ಸಂದೇಶ ಬಂದಿತ್ತು ಎಂದಿದ್ದಾರೆ.

ಎಸ್‌ಐಆರ್ ಮುಂದೂಡಿಕೆ ಕೋರಿ ಹೈಕೋರ್ಟ್‌ಗೆ ಅರ್ಜಿ

ಬಳಿಕ ಬಿಎಲ್‌ಒ ಅವರನ್ನು ಸಂಪರ್ಕಿಸಿದಾಗ, ನೋಟಿಸ್‌ ಪಡೆದುಕೊಂಡು ಮತ್ತೆ ಬಂದು ಭಾರತೀಯ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಸೂರಿ ಹೇಳಿದ್ದಾರೆ.

'2003ರಲ್ಲಿ ನಾನು ಭಾರತದಲ್ಲೇ ಇರಲಿಲ್ಲ. ಹಾಗಾಗಿ ಪಾಸ್‌ಪೋರ್ಟ್‌ ಅನ್ನು ಪುರಾವೆಯಾಗಿ ಕೇಳಿದ್ದಾರೆ' ಎಂದು ಅವರು ತಿಳಿಸಿದ್ದಾರೆ.

ತಮ್ಮ ಬಳಿ ಮತದಾರರ ಗುರುತಿನ ಚೀಟಿ ಮತ್ತು ಆಧಾರ್‌ ಹೊರತಾಗಿ ಇತರ ದಾಖಲೆಗಳು ಇದೆ. ಸಾಮಾನ್ಯ ನಾಗರಿಕರ ಪರಿಸ್ಥಿತಿ ಏನಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

'ಮೂರು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಬಳಿಕವೂ ನನ್ನ ಪೌರತ್ವವನ್ನು ಸಾಬೀತುಪಡಿಸಲು ತೊಂದರೆಯಾಗುತ್ತಿದ್ದರೆ, ಸಾಮಾನ್ಯ ನಾಗರಿಕರ ಗತಿ ಏನು?' ಎಂದು ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಅವರು ಸೂರಿ ಅವರ ಹೇಳಿಕೆಯನ್ನು ಹಂಚಿಕೊಂಡಿದ್ದು, ಎಸ್‌ಐಆರ್ ಪ್ರಕ್ರಿಯೆಯಿಂದ ಸಾಮಾನ್ಯ ನಾಗರಿಕರ ಮೇಲೆ ಉಂಟಾಗಬಹುದಾದ ಪರಿಣಾಮದ ಏನಾಗಿರಬಹುದು ಎಂದು ಪ್ರಶ್ನಿಸಿದ್ದಾರೆ.

ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ದೇಶದ ವಯಸ್ಕ ಜನಸಂಖ್ಯೆಯ ಸುಮಾರು 10 ಕೋಟಿ ಮಂದಿ ಮತದಾನದ ಹಕ್ಕು ಕಳೆದುಕೊಂಡ ನಾಗರಿಕರಾಗಿ ಉಳಿಯುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಚುನಾವಣಾ ಆಯೋಗವು 'ಮತದಾನದ ಹಕ್ಕಿಲ್ಲದ ನಾಗರಿಕರು' ಎಂಬ ಹೊಸ ವರ್ಗವನ್ನೇ ಸೃಷ್ಟಿಸುತ್ತಿದೆ ಎಂದು ಚಿದಂಬರಂ ಆರೋಪಿಸಿದ್ದಾರೆ.

Dear @ECISVEEP Sharing my experience with #SIR in Punjab. Went to BLO, submitted Voter ID and Aadhaar card, was assured that everything is in order. Got a message today from a volunteer saying some details don’t match with SIR in 2003! 1 -

.@ECISVEEP Spoke with BLO, was told that I should come and collect the notice. And then come again with unspecified documents that show I am an Indian citizen. Replied that I was not in India in 2003, so they’ve asked for passport as proof. 2-






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries