HEALTH TIPS

ಶೇಖ್ ಹಸೀನಾ ಕಾರ್ಯಕ್ರಮದೊಂದಿಗೆ ಭಾರತಕ್ಕೆ ಸಂಬಂಧವಿಲ್ಲ: ವಿದೇಶಾಂಗ ಸಚಿವಾಲಯದಿಂದ ಸ್ಪಷ್ಟನೆ

 ಹೊಸದಿಲ್ಲಿಯಲ್ಲಿ ಈ ವಾರ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ನಡೆಸಲಿರುವ ವರ್ಚುಯಲ್ ಪತ್ರಿಕಾಗೋಷ್ಠಿಯ ಆಯೋಜನೆಯಲ್ಲಿ ಭಾರತ ಸರಕಾರದ ಯಾವುದೇ ಪಾತ್ರವಿಲ್ಲ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ಸ್ಪಷ್ಟಪಡಿಸಿದೆ.

ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆದ ಬೃಹತ್ ಸರಕಾರ ವಿರೋಧಿ ಪ್ರತಿಭಟನೆಗಳ ಬಳಿಕ ಢಾಕಾ ತೊರೆದು ಭಾರತಕ್ಕೆ ಬಂದಿದ್ದ ಶೇಖ್ ಹಸೀನಾ, ಸುಮಾರು ಎರಡು ವರ್ಷಗಳ ನಂತರ ಬುಧವಾರ ಸಂಜೆ ಹೊಸದಿಲ್ಲಿಯ ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ವರ್ಚುಯಲ್ ಸಂವಾದ ನಡೆಸಲಿದ್ದಾರೆ. 


ಈ ಕಾರ್ಯಕ್ರಮದ ಕುರಿತು ಸೋಮವಾರ ಬಾಂಗ್ಲಾದೇಶವು ಭಾರತದಿಂದ ಸ್ಪಷ್ಟನೆ ಕೋರಿತ್ತು. ಭಾರತೀಯ ನೆಲದಲ್ಲಿ ನಡೆಯಲಿರುವ ಈ ಸಾರ್ವಜನಿಕ ಕಾರ್ಯಕ್ರಮವು ಇತ್ತೀಚಿನ ತಿಂಗಳುಗಳಲ್ಲಿ ಸುಧಾರಿಸುತ್ತಿರುವ ಭಾರತ-ಬಾಂಗ್ಲಾದೇಶ ಸಂಬಂಧಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರಹಮಾನ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಹುಮಾಯೂನ್ ಕೊಬೀರ್ ಕಳವಳ ವ್ಯಕ್ತಪಡಿಸಿದ್ದರು.

ಈ ಕುರಿತು ಪಾಕ್ಷಿಕ ಮಾಧ್ಯಮಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಈ ಕಾರ್ಯಕ್ರಮವನ್ನು ಖಾಸಗಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದೆ. ಇದರೊಂದಿಗೆ ಭಾರತ ಸರಕಾರಕ್ಕೆ ಯಾವುದೇ ಸಂಬಂಧವಿಲ್ಲ. ಅಲ್ಲದೆ, ಕಾರ್ಯಕ್ರಮದಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಸರಕಾರ ಅನುಮೋದಿಸುವುದಿಲ್ಲ" ಎಂದು ಹೇಳಿದರು.

ಈ ಪ್ರತಿಕ್ರಿಯೆಯ ಮೂಲಕ, ಶೇಖ್ ಹಸೀನಾ ಅವರ ಕಾರ್ಯಕ್ರಮವು ಖಾಸಗಿ ಸಂಸ್ಥೆಯ ಆಯೋಜನೆಯಾಗಿದ್ದು, ಅದರಲ್ಲಿ ಭಾರತ ಸರಕಾರ ಯಾವುದೇ ರೀತಿಯ ಪಾತ್ರ ವಹಿಸಿಲ್ಲ ಎಂಬುದನ್ನು ಸಚಿವಾಲಯ ಸ್ಪಷ್ಟಪಡಿಸಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries