HEALTH TIPS

ಕ್ಷಮೆಯಾಚಿಸಲು ಸಿದ್ಧ: ಮೆಟಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಫೇಸ್‌ಬುಕ್‌ನಲ್ಲಿ ಮಾಡಿದ್ದ ಪೋಸ್ಟ್‌ ಅನ್ನು ಕೆಲವು ಹೊತ್ತು ನಿರ್ಬಂಧಿಸಿದ ಕುರಿತಂತೆ ಕ್ಷಮೆಯಾಚಿಸಲು ಸಿದ್ಧ ಎಂದು ಮೆಟಾ ಸಂಸ್ಥೆಯು ಸಂಸದೀಯ ಸಮಿತಿ ಮುಂದೆ ಒಪ್ಪಿಕೊಂಡಿದೆ. ಆದರೆ, ಈ ಕುರಿತು ಸಂಸ್ಥೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಜೊತೆಗೆ ಹೊಣೆಗಾರಿಕೆಯನ್ನು ವಿಧಿಸಬೇಕು ಎಂದು ಸಮಿತಿಯ ಸದಸ್ಯರು ಒತ್ತಾಯಿಸಿದ್ದಾರೆ. 


ಸೋಮವಾರ ನಡೆದ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿ ಸಭೆಯಲ್ಲಿ ಮಾತನಾಡಿದ ಸದಸ್ಯರು, 'ಮೆಟಾಗೆ ದೊಡ್ಡ ಮಟ್ಟದ ಆದಾಯವು ಭಾರತದಿಂದಲೇ ದೊರೆಯುತ್ತದೆ. ಆದರೂ ಕೂಡ ಈ ನೆಲದ ಕಾನೂನು ಪಾಲಿಸುತ್ತಿಲ್ಲ. ಅಶ್ಲೀಲ ಚಿತ್ರಗಳು ಈಗಲೂ ಮುಕ್ತವಾಗಿ ಲಭ್ಯವಾಗು ತ್ತಿದ್ದು, ನೈಜ ವಿಚಾರಗಳನ್ನು ಕೆಲವೊಮ್ಮೆ ತೆಗೆದುಹಾಕಲಾಗುತ್ತಿದೆ' ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೆಟಾ ಅಧಿಕಾರಿಗಳು, ಪ್ರಧಾನಿ ಮೋದಿ ಅವರ ಫೋಸ್ಟ್‌ ನಿರ್ಬಂಧಿಸಿದ ಕುರಿತು ಕ್ಷಮೆ ಯಾಚಿಸಲು ಸಿದ್ಧ ಎಂದು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಷ್ಟಕ್ಕೆ ತೃಪ್ತರಾಗದ ಬಿಜೆಪಿ ಸಂಸದರೊಬ್ಬರು, 'ಕ್ಷಮೆಯೊಂದೇ ಸಾಕಾಗುವುದಿಲ್ಲ. ಹೊಣೆಗಾರಿಕೆಯ ಜೊತೆಗೆ ಕಾನೂನು ಕ್ರಮಕ್ಕೆ ಮುಂದಾ ಗಬೇಕು' ಎಂದು ಒತ್ತಾಯಿಸಿದರು.

ಏನಾಗಿತ್ತು: ಪ್ರಧಾನಿ ನರೇಂದ್ರ ಮೋದಿ ಅವರು ಫೇಸ್‌ಬುಕ್‌ನಲ್ಲಿ ವಿಡಿಯೊ ಒಂದನ್ನು ಜುಲೈ 23ರಂದು ಪ್ರಕಟಿಸಿದಾಗ ಅದನ್ನು ಕೆಲವು ಹೊತ್ತು ನಿರ್ಬಂಧಿಸಿತ್ತು. ಪ್ರಧಾನಿ ಮೋದಿ ಅವರು ದೇಶದ ಯುವಜನರನ್ನು ಉದ್ದೇಶಿಸಿ ಪೋಸ್ಟ್‌ ಪ್ರಕಟಿಸಿದ್ದರು. ಆದರೆ ಇದನ್ನು ಫೇಸ್‌ಬುಕ್‌ ನಿರ್ಬಂಧಿಸಿತ್ತು. ತಾಂತ್ರಿಕ ಲೋಪದ ಕಾರಣದಿಂದಾಗಿ ಈ ರೀತಿ ಆಗಿತ್ತು ಎಂದು ಮೆಟಾ ಕಂಪನಿಯು ಹೇಳಿತ್ತಾದರೂ, ಅದು ಸಮರ್ಪಕವಾಗಿ ಇಲ್ಲ ಎಂದು ಐ.ಟಿ ಸಚಿವಾಲಯ ಹೇಳಿತ್ತು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries