HEALTH TIPS

ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾರ್ಥಿಗಳಿಗಾಗಿ ಉಚಿತ ಆನ್ ಲೈನ್ ಕೋಚಿಂಗ್: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುವ ಪರೀಕ್ಷಾರ್ಥಿಗಳಿಗಾಗಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಉಚಿತ ಆನ್ ಲೈನ್ ತರಬೇತಿಯನ್ನು ಘೋಷಿಸಿದ್ದು, ಆ ಮೂಲಕ, ಪರೀಕ್ಷಾರ್ಥಿಗಳ ಕುಟುಂಬಗಳ ಆರ್ಥಿಕ ಹೊರೆಯನ್ನು ತಗ್ಗಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.


ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ತರಬೇತಿ ತರಗತಿಗಳಿಂದ ಬಡ ಹಾಗೂ ಮಧ್ಯಮ ವರ್ಗಗಳಿಗೆ ಹೊರೆಯಾಗುತ್ತಿದೆ. ಹೀಗಾಗಿ, ನಾವು ವಿವಿಧ ಪರೀಕ್ಷೆಗಳಿಗೆ ಉಚಿತ ಆನ್ ಲೈನ್ ತರಬೇತಿಯನ್ನು ನೀಡಲಿದ್ದೇವೆ" ಎಂದು ಘೋಷಿಸಿದರು.

"ನಾವೇನಾದರೂ ನಮ್ಮ ಮಕ್ಕಳನ್ನು ತರಬೇತಿ ತರಗತಿಗೆ ಕಳಿಸದಿದ್ದರೆ, ನಾವು ಪ್ರತಿಷ್ಠಿತ ಕುಟುಂಬವಲ್ಲ ಎಂದು ಪ್ರತಿ ಪೋಷಕರೂ ಭಾವಿಸುತ್ತಿದ್ದಾರೆ" ಎಂದು ಅವರು ಹೇಳಿದರು.

ಅಂತಹ ಕುಟುಂಬಗಳು ಸಾವಿರಾರು ಕೋಟಿ ರೂಪಾಯಿಯನ್ನು ಉಳಿತಾಯ ಮಾಡಬಹುದು, ತಮ್ಮ ಮಕ್ಕಳೊಂದಿಗೆ ನಿಕಟವಾಗಿ ಇರಬಹುದು ಹಾಗೂ ಅವರನ್ನು ಆರೈಕೆ ಮಾಡಬಹುದು ಎಂದು ಅವರು ಭರವಸೆ ನೀಡಿದರು.

"ಹೀಗಾಗಿ, ನಾವು ಯುವಜನತೆಗೆ ವಿವಿಧ ಪರೀಕ್ಷೆಗಳಿಗಾಗಿ ಉಚಿತ ಆನ್ ಲೈನ್ ತರಬೇತಿಯನ್ನು ನೀಡಲು ನಿರ್ಧರಿಸಿದ್ದೇವೆ. ನಮ್ಮಲ್ಲಿ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯವಿದೆ. ನಮ್ಮಲ್ಲಿ ಅದ್ಭುತ ಪ್ರತಿಭೆ ಮತ್ತು ಶಿಕ್ಷಕರಿದ್ದಾರೆ. ಈ ಸಂಪನ್ಮೂಲಗಳನ್ನು ಒಟ್ಟಾಗಿ ತರುವ ಮೂಲಕ, ದೇಶದ ಯುವಜನತೆಗೆ ಉಚಿತ ತರಬೇತಿಯನ್ನು ನೀಡುವ ಸಂಪೂರ್ಣ ಜಾಲವನ್ನು ನಿರ್ಮಿಸಲಿದ್ದೇವೆ" ಎಂದು ಅವರು ತಿಳಿಸಿದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries