ಬದಿಯಡ್ಕ: ಕೇರಳ ಸರ್ಕಾರ ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆ, ಕಾಸರಗೋಡು ಜಿಲ್ಲಾ ಬುಡಕಟ್ಟು ಕ್ಷೇಮಾಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಮೂಲ ನಿವಾಸಿಗಳ ದಿನಾಚರಣೆಯ ಭಾಗವಾಗಿ ವಿವಿಧ ಕೊರಗ ಉನ್ನತಿಗಳಲ್ಲಿ ಆಗಸ್ಟ್ 9 ರಿಂದ 15ರ ತನಕ `ಜನನ ಸುರಕ್ಷಾ ಆರೋಗ್ಯವಂತ ಜೀವನ' ಕಾರ್ಯಕ್ರಮ ಜರಗಿತು. ಬುಧವಾರ ನೀರ್ಚಾಲು ವಾರ್ಡು ಮಾಡತ್ತಡ್ಕ ಕೊರಗ ಉನ್ನತಿಯಲ್ಲಿ ಜರಗಿದ ಆರೋಗ್ಯ ತಪಾಸಣೆ ಶಿಬಿರವನ್ನು ಗ್ರಾಮ ಪಂಚಾಯಿತಿ ಸದಸ್ಯ ಶ್ಯಾಮಪ್ರಸಾದ ಸರಳಿ ಉದ್ಘಾಟಿಸಿದರು. ಪ್ರಮೋಟರ್ ಧೀಕ್ಷಿತ್ ಸ್ವಾಗತಿಸಿ, ಪ್ರತಿಜ್ಞೆ ಬೋಧಿಸಿದರು. ಆರೋಗ್ಯ ಇಲಾಖೆಯ ಜೆಎಚ್‍ಐ ಸೂರಜ್ ತಪಾಸಣೆ ನಡೆಸಿದರು. ಪ್ರಮೋಟರ್ ಪ್ರಣವ್ ಗಣೇಶ್ ವಂದಿಸಿದರು.

.jpg)
