ಕೀವ್: ಭಾರತ ಮೂಲದ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರಿಗೆ ಸೇರಿದ ಉಕ್ರೇನ್‌ನ ಅತಿ ದೊಡ್ಡ ಸಂಯೋಜಿತ ಉಕ್ಕು ಉತ್ಪಾದನಾ ಘಟಕ 'ಆರ್ಸೆಲರ್‌ಮಿತ್ತಲ್' ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ.
ಉಕ್ರೇನ್‌ನ ಡ್ರೋನ್ ದಾಳಿಗೆ ಪ್ರತೀಕಾರವಾಗಿ ರಷ್ಯಾ ನಡೆಸಿದ ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 14 ಕಾರ್ಮಿಕರು ಗಾಯಗೊಂಡಿದ್ದಾರೆ.
ದಾಳಿಯಿಂದಾಗಿ ಪ್ರಮುಖ ಇಂಧನ ಘಟಕಗಳಿಗೆ ಹಾನಿಯಾಗಿದ್ದು, ಉತ್ಪಾದನೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.
ಇತರ ಪ್ರದೇಶಗಳ ಮೇಲೂ ದಾಳಿ ನಡೆದಿದ್ದು, ಆಗ್ನೇಯ ಜಪೋರಿಝಿಯಾ ಪ್ರದೇಶದಲ್ಲಿ ಇಬ್ಬರು, ಸುಮಿಯ ಗಡಿ ಪ್ರದೇಶದಲ್ಲಿ ಒಬ್ಬರು ಮತ್ತು ಪೂರ್ವದ ಡೊನೆಟ್ಸ್ಕ್‌ನಲ್ಲಿ ಮತ್ತೊಬ್ಬರು ಮೃತಪಟ್ಟಿದ್ದಾರೆ.
ರಷ್ಯಾದ ಮೇಲೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ರಾತ್ರೋರಾತ್ರಿ ದೇಶದಾದ್ಯಂತ 822 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಅಲ್ಲದೇ, ಡ್ರೋನ್ ದಾಳಿಗೆ ರಷ್ಯಾದ ಅತ್ಯಂತ ಶ್ರೀಮಂತ ಮಹಿಳೆ ಬಿಲಿಯನೇರ್ ಟಟಯಾನಾ ಕಿಮ್ ಅವರಿಗೆ ಸೇರಿದ 'ವೈಲ್ಡ್‌ಬೆರ್ರಿಸ್' ಗೋದಾಮಿಗೆ ಭಾರಿ ಹಾನಿಯಾಗಿದೆ.

