HEALTH TIPS

ನನ್ನೊಳಗಿನ ನೋವೇ ರಾಜಕೀಯಕ್ಕೆ ಬರಲು ಕಾರಣ: ಸೋನಿಯಾ ಗಾಂಧಿ

ನ್ಯೂಯಾರ್ಕ್: ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ನವೆಂಬರ್ 10ರಂದು ಬಿಡುಗಡೆಯಾಗಲಿದೆ. 


ಈ ಪುಸ್ತಕದಲ್ಲಿ ತಮ್ಮ ವೈಯಕ್ತಿಕ ಜೀವನದ ನೋವು-ನಲಿವು, ಸಾರ್ವಜನಿಕ ಜೀವನ ಮತ್ತು ರಾಜಕೀಯಕ್ಕೆ ಬರಲು ಕಾರಣವಾದ ಘಟನೆಗಳ ಕುರಿತು ಸೋನಿಯಾ ವಿವರಿಸಿದ್ದಾರೆ.

ಪುಸ್ತಕದ ಕುರಿತು ಪ್ರಕಾಶನ ಸಂಸ್ಥೆ 'ಆಲ್ಫ್ರೆಡ್ ಎ ಕ್ನಾಫ್' ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಸೋನಿಯಾ ಗಾಂಧಿ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

'ನನ್ನ ಜೀವನದ ಕುರಿತು ನಾನೇ ಬರೆಯುವುದು ಸುಲಭದ ಕೆಲಸವಾಗಿರಲಿಲ್ಲ. ನನ್ನೊಳಗೆ ಬಚ್ಚಿಟ್ಟುಕೊಂಡಿದ್ದ ಅನುಭವಗಳನ್ನು ಅಕ್ಷರಗಳ ಮೂಲಕ ತೆರೆದಿಡುವುದಾಗಿತ್ತು. ನೋವು ಮತ್ತು ವೈಯಕ್ತಿಕ ನಷ್ಟವೇ ನನ್ನನ್ನು ರಾಜಕೀಯ ರಂಗಕ್ಕೆ ತಳ್ಳಿದವು. ಅಲ್ಲಿಯವರೆಗೆ ನಾನು ನನ್ನ ವೈಯಕ್ತಿಕ ಜೀವನವನ್ನು ಅತ್ಯಂತ ಖಾಸಗಿಯಾಗಿ ಕಾಯ್ದುಕೊಂಡಿದ್ದೆ' ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

1965ರಲ್ಲಿ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿ 19 ವರ್ಷದ ಸೋನಿಯಾ ಮತ್ತು ರಾಜೀವ್ ಗಾಂಧಿ ನಡುವೆ ಚಿಗುರಿದ ಪ್ರೀತಿ ಹಾಗೂ ಮೂರು ವರ್ಷಗಳ ನಂತರ ನಡೆದ ಅವರ ವಿವಾಹದ ದಿನಗಳನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಇಟಲಿಯ ಸಣ್ಣ ನಗರದ ಬಾಲ್ಯದಿಂದ ಹಿಡಿದು ಭಾರತದ ರಾಜಕೀಯ ಕುಟುಂಬದ ಸೊಸೆಯಾಗಿ ಬಂದ ಪ್ರಸಂಗ, ಇಂದಿರಾ ಗಾಂಧಿ ಅವರ ಪರಿಚಯ, ಹಿಂದಿ ಕಲಿಯಲು ಪಟ್ಟ ಶ್ರಮ, ಸೀರೆ ಉಡುವುದು ಮತ್ತು ಭಾರತೀಯ ಸಂಸ್ಕೃತಿಗೆ ಒಗ್ಗಿಕೊಂಡ ರೀತಿಯನ್ನು ಪುಸ್ತಕದಲ್ಲಿ ವಿವರಿಸಲಾಗಿದೆ.

1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆ, 1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯಂತಹ ಸಾಲು ಸಾಲು ದುರಂತಗಳು ಗಾಂಧಿ ಕುಟುಂಬದ ಮೇಲೆ ಬೀರಿದ ಪರಿಣಾಮ ಸೇರಿದಂತೆ ಅವರ ರಾಜಕೀಯ ಪ್ರವೇಶ ಕುರಿತು ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಈ ಪುಸ್ತಕವನ್ನು 'ಆಲ್ಫ್ರೆಡ್ ಎ ಕ್ನಾಫ್' ಸಂಸ್ಥೆಯು ಇ-ಬುಕ್ ರೂಪದಲ್ಲಿ ಬಿಡುಗಡೆ ಮಾಡುತ್ತಿದ್ದು, 'ಪೆಂಗ್ವಿನ್ ರ್‍ಯಾಂಡಮ್ ಹೌಸ್' ಆಡಿಯೊ ಆವೃತ್ತಿಯನ್ನು ಹೊರತರಲಿದೆ. ಆರಂಭಿಕವಾಗಿ 1,00,000 ಪ್ರತಿಗಳನ್ನು ಮುದ್ರಿಸಲು ಪ್ರಕಾಶಕರು ಯೋಜನೆ ರೂಪಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries