HEALTH TIPS

ಫ್ಲೋರಿಡಾ: ಡೆಮಾಕ್ರಟಿಕ್‌ ಅಭ್ಯರ್ಥಿಯಾಗಿ ಭಾರತ ಮೂಲದ ಪಿಯಾ ದಾಂಡಿಯಾ ಆಯ್ಕೆ

ವಾಷಿಂಗ್ಟನ್‌: ಅಮೆರಿಕದ ಫ್ಲೋರಿಡಾದ 22ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್‌ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಭಾರತೀಯ ಮೂಲದ ಮಾಜಿ ಪ್ರಾಂಶುಪಾಲೆ ಪಿಯಾ ದಾಂಡಿಯಾ ಜಯ ಗಳಿಸಿದ್ದಾರೆ. 


ಇದರೊಂದಿಗೆ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಕ್ಯಾಸೆ ಅಸ್ಕರ್ ಅವರ ವಿರುದ್ಧ ಸ್ಪರ್ಧೆಗೆ ಸಜ್ಜಾಗಿದ್ದಾರೆ.

ಶೇ 68.6ರಷ್ಟು ಮತಗಳನ್ನು ಗಳಿಸಿದ ದಾಂಡಿಯಾ ಅವರು ಪ್ರತಿಸ್ಪರ್ಧಿ ವಕೀಲೆ ಕೇಸಿಯಾ ಎರ್ಲಿ (ಶೇ 31.4 ಮತ) ಅವರನ್ನು ಪರಾಭವಗೊಳಿಸಿದರು.

'ಈ ಅಭಿಯಾನದಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟ ಎಫ್‌ಎಲ್‌-22 ಕ್ಷೇತ್ರದ ಮತದಾರರಿಗೆ ಧನ್ಯವಾದಗಳು. ನನ್ನ ವಿದ್ಯಾರ್ಥಿಗಳು, ನನ್ನ ಮಗ ಮತ್ತು ಉತ್ತಮ ಭವಿಷ್ಯಕ್ಕೆ ಅರ್ಹರಾಗಿರುವ ಈ ಕ್ಷೇತ್ರದ ಪ್ರತಿಯೊಂದು ಮಗುವಿಗಾಗಿ ನಾನು ಚುನಾವಣಾ ಕಣಕ್ಕಿಳಿದಿದ್ದೇನೆ,' ಎಂದು ಪಿಯಾ ದಾಂಡಿಯಾ 'ಎಕ್ಸ್‌'ನಲ್ಲಿ ತಿಳಿಸಿದ್ದಾರೆ.

'ಜೀವನ ವೆಚ್ಚ ತಗ್ಗಿಸಲು, ಭ್ರಷ್ಟಾಚಾರವನ್ನು ಕೊನೆಗಾಣಿಸಲು ಹಾಗೂ ವಾಷಿಂಗ್ಟನ್ ಆಡಳಿತವು ಜನಸಾಮಾನ್ಯರ ಪರವಾಗಿ ಕೆಲಸ ಮಾಡುವಂತೆ ಮಾಡಲು ನಾವೆಲ್ಲರೂ ಒಟ್ಟಾಗಿ ಹೋರಾಟ ಮುಂದುವರಿಸಲಿದ್ದೇವೆ. ನಿಮ್ಮೊಂದಿಗೆ ಹೆಜ್ಜೆ ಇಡುತ್ತಿರುವುದಕ್ಕೆ ನಾನು ಕೃತಜ್ಞಳಾಗಿದ್ದೇನೆ,' ಎಂದಿದ್ದಾರೆ.

ಫ್ಲೋರಿಡಾದ ಪಾಮ್ ಬೀಚ್ ಕೌಂಟಿಯಲ್ಲಿ ಹುಟ್ಟಿ ಬೆಳೆದ ಪಿಯಾ ದಾಂಡಿಯಾ, ಶಿಕ್ಷಕಿಯಾಗಿ ವೃತ್ತಿಜೀವನ ಆರಂಭಿಸಿ ನಂತರ ಹಾರ್ಲೆಮ್‌ನಲ್ಲಿ ಪ್ರೌಢಶಾಲಾ ಪ್ರಾಂಶುಪಾಲೆಯಾಗಿ ಕಾರ್ಯನಿರ್ವಹಿಸಿದ್ದಾರೆ.


Thank you, FL-22, for believing in this campaign. I got into this race for my students, my son, and every kid growing up in this district who deserves a better future. Together, we will keep building a movement to lower costs, end corruption, and make Washington work for

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries