ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸನಿಹದ ನಿವಾಸಿ, ಹಿರಿಯ ಆರೆಸ್ಸೆಸ್-ಸಂಘಪರಿವಾರ ಕಾರ್ಯಕರ್ತ ಶಿವಶಂಕರ ಭಟ್(73)ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಆರೆಸ್ಸೆಸ್ ಬಜಕೂಡ್ಲು ಶಾಖೆಯ ಹಿರಿಯ ಸ್ವಯಂಸೇವಕರಾಗಿದ್ದರು.
ಪೆರ್ಲ ಪೇಟೆಯಲ್ಲಿ ಸ್ವಂತ ಜವುಳಿ ಅಂಗಡಿ ಹೊಂದಿದ್ದ ಇವರು ಟೈಲರ್ ವೃತ್ತಿ ನಡೆಸುತ್ತಿದ್ದರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.


