ಗುವಾಹಟಿ: ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆಯಲ್ಲಿ ಶನಿವಾರ ಸಂಭವಿಸಿದ್ದ ಪ್ರವಾಹದಲ್ಲಿ ನಾಪತ್ತೆಯಾಗಿದ್ದ ಐವರು ಸೇನಾ ಸಿಬ್ಬಂದಿಯ ಶೋಧ ಕಾರ್ಯಾಚರಣೆ ಸೋಮವಾರವೂ ನಡೆಯಿತು.
ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಎರಡು ಸೇನಾ ಶಿಬಿರಗಳು ಕೊಚ್ಚಿ ಹೋಗಿದ್ದವು.
ನಾಪತ್ತೆಯಾಗಿದ್ದ ಏಳು ಸಿಬ್ಬಂದಿಯಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. ಇನ್ನುಳಿದವರ ಸುಳಿವು ಸಿಕ್ಕಿಲ್ಲ.
ಅರುಣಾಚಲದಲ್ಲಿ ಮಳೆ ಅವಘಡದಿಂದಾಗಿ ಈ ವರ್ಷದ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ. 209 ಬಾರಿ ಭೂಕುಸಿತ ಮತ್ತು 52 ಬಾರಿ ಪ್ರವಾಹ ಸಂಭವಿಸಿದೆ. 1.56 ಲಕ್ಷಕ್ಕೂ ಅಧಿಕ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ.

