ಮುಳ್ಳೇರಿಯ: ಅಡಕೆ ಸಂಗ್ರಹಿಸಲು ತೋಟಕ್ಕೆ ತೆರಳಿದ್ದ ಗೃಹಿಣಿಯ ಮೃತದೇಹ ತೋಟದ ಸಮೀಪದ ತೋಡಿನಲ್ಲಿ ಪತ್ತೆಯಾಗಿದೆ. ಅಡೂರು ಪಾಂಡಿ ಮಲ್ಲಂಬಾರ ತೆಮ್ಮನಗುಂಡಿ ನಿವಾಸಿ ದಿ. ಜೋಮಣ್ಣ ನಾಯ್ಕ್ ಅವರ ಪತ್ನಿ ಗುಲಾಬಿ ಬಾಯಿ (66) ಮೃತಪಟ್ಟವರು.
ಅಡಕೆ ಸಂಗ್ರಹಿಸಲು ಮನೆಯ ಸನಿಹದ ತೋಟಕ್ಕೆ ಹೋಗುವುದಾಗಿ ಹೇಳಿ ಬುಧವಾರ ಸಂಜೆ ಮನೆಯಿಂದ ಹೊರಟಿದ್ದ ಗುಲಾಬಿ ಬಾಯಿ ಬಳಿಕ ನಾಪತ್ತೆಯಾಗಿದ್ದರು. ಬಹಳ ಸಮಯವಾದರೂ ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ, ತೋಟದ ಸಮೀಪದ ತೋಡಿನ ಬದಿಯಲ್ಲಿ ಅವರ ಚಪ್ಪಲಿಗಳು ಪತ್ತೆಯಾಗಿದ್ದವು.
ಸ್ಥಳೀಯರು ವ್ಯಾಪಕವಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ನಡೆಸಿದ ಹುಡುಕಾಟದ ವೇಳೆ ತೋಟದಿಂದ ಅನತಿ ದೂರದಲ್ಲಿರುವ ತಿಮ್ಮನಗುಂಡಿ ತೋಡಿನಲ್ಲಿ ಗುಲಾಬಿ ಬಾಯಿ ಅವರ ಮೃತದೇಹ ಪತ್ತೆಯಾಗಿದೆ. ಆದೂರು ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


