ಕುಂಬಳೆ: ಬಂದ್ಯೋಡು ಸನಿಹದ ಅಡ್ಕ ಎಂಬಲ್ಲಿ ಬೀದಿ ನಾಯಿಗಳ ದಾಳಿಯಿಂದ ಪಾರಾಗಲು ಓಡಿದ ಮದ್ರಸಾ ವಿದ್ಯಾರ್ಥಿ ಬಿದ್ದು ಗಾಯಗೊಂಡಿದ್ದಾರೆ. ಅಡ್ಕ ನಿವಾಸಿ ಝಯಾನ್ ಗಾಯಾಳು. ಗುರುವಾರ ಬೆಳಗ್ಗೆ ಮದ್ರಸಾ ತೆರಳಲು ಮನೆಯಿಮದ ಹೊರಟಿದ್ದ ಈತನ ಮೇಲೆ ಬೀದಿನಾಯಿ ದಾಳಿಗೆ ಮುಂದಾಗಿದ್ದು, ಈ ಸಂದರ್ಭ ಬಲಕ ಬೊಬ್ಬಿಡುತ್ತಿದ್ದಂತೆ ಸನಿಹದ ಮನೆಯವರು ಆಗಮಿಸಿ ರಕ್ಷಿಸಿದ್ದರು. ನಾಯಿಗಳಿಂದ ಪಾರಾಗಲು ಓಡುತ್ತಿರುವ ಮಧ್ಯೆ ಬಿದ್ದು ಗಾಯಗೊಂಡಿದ್ದನು.

