ಕುಂಬಳೆ: ಕಾರಿನಲ್ಲಿ ಸಂಚರಿಸುತ್ತಿದ್ದ ಯುವಕನನ್ನು ತಡೆದು ನಿಲ್ಲಿಸಿ ಹಣ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಠಾಣೆ ಪೊಲೀಸರು ಇಬ್ಬರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಬಂಬ್ರಾಣ ನಾಂಬಾಡಿ ವಿಠಲ್ ಹಸೈನಾರ್ (22) ಮತ್ತು ಅಹಮ್ಮದ್ ಇಜಾಸ್ (20) ಎಂಬವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ತಾವು ಕಾರಲ್ಲಿ ಸಂಚರಿಸುವ ಮಧ್ಯೆ, ಸ್ಕೂಟರಲ್ಲಿ ಆಗಮಿಸಿದ ತಂಡವೊಂದು ಉಜಿರೆಕೆರೆ ಎಂಬಲ್ಲಿ ಕಾರು ತಡೆದು, ಕೈಯಿಂದ ಥಳಿಸಿ ಚಾಕು ತೋರಿಸಿ ಹಣ ನೀಡುವಂತೆ ಬೆದರಿಸಿ, ಅಹಮ್ಮದ್ ಇಜಾಸ್ ಅವರ 6ಸಾವಿರ ರೂ. ನಗದು, ಪಾನ್ಕಾರ್ಡ್, ದಾಖಲೆ ಒಳಗೊಂಡ ಒಳಗೊಂಡ ಪರ್ಸ್ ಹಾಗೂ ಗೂಗಲ್ ಪೇ ಮೂಲಕ 7406ರೂ ಎಗರಿಸಿರುವುದಲ್ಲದೆ, 20ಸಾವಿರ ರೂ. ನೀಡುವಂತೆ ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಅಹಮ್ಮದ್ ಇಜಾಸ್ ಎಂಬವರು ನೀಡಿದ ದೂರಿನನ್ವಯ ಈ ಕೇಸು. ಆರೋಪಿಗಳು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಸುತ್ತಿದ್ದಾರೆ.

