HEALTH TIPS

ನಿಂದನೆ: ಎಸ್. ಐ. ಟಿ.ಪಿ ಸೈಫುದ್ದೀನ್ ಅಮಾನತು

ಕಾಸರಗೋಡು: ಅಪಹರಣ ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧಿತರಾದ ಆರೋಪಿಗಳ ಭೇಟಿಗೆ ಬಂದ ತಾಯಿ ಮತ್ತು ಪುತ್ರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆಂಬ ಆರೋಪದನ್ವಯ ಕಾಸರಗೋಡು ನಗರ ಠಾಣೆ ಎಸ್. ಐ.  ಟಿ.ಪಿ ಸೈಫುದ್ದೀನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕಣ್ಣೂರು ಡಿಐಜಿ  ಕೆ.ಕಾರ್ತಿಕ್ ನಿರ್ದೇಶ ಪ್ರಕಾರ ಈ ಅಮಾನತು ನಡೆಸಲಾಗಿದೆ.  


ಪೆÇಲೀಸ್ ಠಾಣೆಗೆ ಬರುವ ಸಾರ್ವಜನಿಕರು ಮತ್ತು ದೂರುದಾತರ ಜತೆ ಪೆÇಲೀಸರು ಗೌರವಯುತವಾಗಿ ವ್ಯವಹರಿಸಬೇಕೆಂಬ ಗೃಹ ಇಲಾಖೆಯ ಆದೇಶ ಚಾಲ್ತಿಯಲ್ಲಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಅಪಹರಣ ಪ್ರಕರವೊಂದಕ್ಕೆ ಸಂಬಂಧಿಸಿ ಬಂಧಿತರಾದ ಇಬ್ಬರು ಆರೋಪಿಗಳಲ್ಲಿ ಒಬ್ಬನ  ಭೇಟಿಗಾಗಿ ಕಾಸರಗೋಡು ನಗರ ಪೆÇಲೀಸ್ ಠಾಣೆಗೆ ಆಗಮಿಸಿದ್ದ ತಾಯಿ ಮತ್ತು ಪುತ್ರಿ ಆರೋಪಿಯ ಬಿಡುಗಡೆಗೆ ಆಗ್ರಹಿಸಿ ಠಾಣೆಯೊಳಗೆ ದಾಂಧಲೆ ನಡೆಸಿದ್ದು,  ಇದರಂತೆ ಮಹಿಳಾ ಪೆÇಲೀಸ್ ಸಿಬ್ಬಂದಿ ನೆರವಿನಿಂದ ಇವರಿಬ್ಬರನ್ನು ಠಾಣೆಯಿಂದ ಹೊರಗೆಳೆದು ತರಲಾಗಿತ್ತು. ಈ ಸಂದರ್ಭ ಹೊರಬಂದ ಪುತ್ರಿ ತಾಯಿಯನ್ನು ಎಳೆದುತರುವ ದೃಶ್ಯವನ್ನು ತನ್ನ ಮೊಬೈಲಿನಲ್ಲಿ ಚಿತ್ರೀಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಎಸ್‍ಐ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನಿತಿನ್‍ರಾಜ್ ನಗರ ಠಾಣೆಗೆ ಆಗಮಿಸಿ ಸಿಸಿಟಿವಿ ದೃಶ್ಯ ತಪಾಸಣೆ ನಡೆಸಿದ್ದರು. ನಂತರ ಈ ಬಗ್ಗೆ ಡಿಐಜಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಎಸ್. ಐ. ಅಮಾನತು ನಡೆದಿದೆ. ಈ ಬಗ್ಗೆ ಇಲಾಖಾವಾರು ತನಿಖೆಗಾಗಿ ಕಾಸರಗೋಡು ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಅವರನ್ನು ವಿಶೇಷಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries