ಕಾಸರಗೋಡು: ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 7 ವರ್ಷದ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. ಮೊಗ್ರಾಲು ಪುತ್ತೂರು ಸನಿಹದ ಮಜಲು ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಪ್ರಕಾಶ್ ಹಾಗೂ ಮಾಳವಿಕಾ ದಂಪತಿ ಪುತ್ರಿ ಅನ್ಸಿಕಾ ಮೃತಪಟ್ಟ ಬಾಲಕಿ.
ಅಸೌಖ್ಯ ಹಿನ್ನೆಲೆಯಲ್ಲಿ ಶನಿವಾರ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಬಾಲಕಿ ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದ ಅನ್ಸಿಕಾ ಚಿಕಿತ್ಸೆಯಲ್ಲಿದ್ದಳು. ಕಾಸರಗೋಡು ನಗರ ಠಾಣೆ ಪೋಲೀಸರು ಮಹಜರು ನಡೆಸಿದ್ದಾರೆ. ಕೂಡ್ಲು ಪಾಯಿಷ್ಣಾಲ್ ಚೈತನ್ಯ ವಿದ್ಯಾಲಯದ 2ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.


