HEALTH TIPS

ಮಣಿಪುರದಲ್ಲಿ ಬಂದ್‌: ಕೆಲವೆಡೆ ಜನಜೀವನ ಅಸ್ತವ್ಯಸ್ತ

ಇಂಫಾಲ (PTI): ಜನ ಗಣತಿಗೂ ಮುನ್ನ ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್‌ಆರ್‌ಸಿ) ನಡೆಸುವಂತೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ಎರಡು ದಿನ ಬಂದ್‌ಗೆ ಕರೆ ನೀಡಿವೆ.


ಇದರಿಂದ, ಮಣಿಪುರದ ಐದು ಜಿಲ್ಲೆಗಳಲ್ಲಿ ಮಂಗಳವಾರ ಮಾರುಕಟ್ಟೆ, ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದವು. ಬಸ್‌ ಸಂಚಾರ ಸ್ಥಗಿತಗೊಂಡಿತ್ತು.

ಜೆಎಫ್‌ಡಿ ಸಂಘಟನೆ ಕರೆ ನೀಡಿರುವ ಬಂದ್‌ಗೆ ಮಣಿಪುರದ ಗುಡ್ಡಪ್ರದೇಶಗಳಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.

ಕಣಿವೆ ಭಾಗದ ಹಲವು ಪ್ರದೇಶಗಳಲ್ಲಿ ರಸ್ತೆ ತಡೆ ನಡೆಸಲಾಯಿತು. ಕೆಲ ತರಕಾರಿ ಅಂಗಡಿಗಳನ್ನು ಒತ್ತಾಯಪೂರ್ವಕವಾಗಿ ಮುಚ್ಚಿಸಲಾಗಿತ್ತು. ತೌಬಾಲ್‌ನಲ್ಲಿ ರಸ್ತೆಯಲ್ಲಿ ಟಯರ್‌ಗಳನ್ನು ಸುಟ್ಟುಹಾಕಿ 'ಎನ್‌ಆರ್‌ಸಿ ಬೇಡದಿದ್ದರೆ, ಜನ ಗಣತಿಯೂ ಬೇಡ' ಎಂದು ಪ್ರತಿಭಟನಕಾರರು ಘೋಷಣೆಗಳನ್ನು ಹಾಕಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries