ಮಲಂಪುಳ: ಕಳಡೆದ ಆ. 19 ರಂದು, ಮಲಂಪುಳ ಉದ್ಯಾನಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು ಹತ್ತು ಮಹಿಳಾ ಕಾರ್ಮಿಕರು ತಮ್ಮ ನಾಲ್ಕು ತಿಂಗಳ ಸಂಬಳ ಬಾಕಿಯ ಬಗ್ಗೆ ಕೇಂದ್ರ ಸಚಿವರಿಗೆ ಮಾಹಿತಿ ನಿಡಿದ್ದು, ತಕ್ಷಣ, ಕೇಂದ್ರ ಸಚಿವರು ಪಾಲಕ್ಕಾಡ್ ಜಿಲ್ಲಾಧಿಕಾರಿ ಮತ್ತು ಕೇರಳ ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಮಾಲೋಚನೆಗೈದು ಶೀಘ್ರ ಪರಿಹಾರಕ್ಕೆ ಸೂಚಿಸಿದ್ದರು. ಪರಿಣಾಮವಾಗಿ, ಬಾಕಿ ಇದ್ದ ನಾಲ್ಕು ತಿಂಗಳ ವೇತನದಲ್ಲಿ ಒಂದು ತಿಂಗಳ ವೇತನವನ್ನು ಕೇರಳ ಸರ್ಕಾರ ಪಾವತಿಸಿತು. ಮೂರು ತಿಂಗಳ ಸಂಬಳ ಇನ್ನೂ ಬಾಕಿ ಇದೆ.
ಓಣಂ ಋತುವಿನಲ್ಲಿ ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ಓಣಂ ಕಿಟ್‍ಗಳನ್ನು ವೈಯಕ್ತಿಕವಾಗಿ ನೀಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದರು. ಬಳಿಕ ಕಿಟ್‍ಗಳನ್ನು ಖರೀದಿಸಿ ಒದಗಿಸುವಂತೆ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಸಿ. ಕೃಷ್ಣಕುಮಾರ್ ಅವರಿಗೆ ಸೂಚನೆ ನೀಡಿದ್ದು ಅದಕ್ಕಾಗಿ ಮೊತ್ತವನ್ನು ವರ್ಗಾಯಿಸುವುದಾಗಿ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ (ಆ.22) ಸಿ.ಕೃಷ್ಣಕುಮಾರ್ ಮತ್ತು ಬಿಜೆಪಿ ಕಾರ್ಯಕರ್ತರು ಮಲಂಪುಳ ಉದ್ಯಾನದ ಮಹಿಳಾ ಕಾರ್ಯಕರ್ತರಿಗೆ ಓಣಂ ಕಿಟ್‍ಗಳನ್ನು ಹಸ್ತಾಂತರಿಸಿದರು.
ಬಿಜೆಪಿ ಮಲಂಪುಳ ಮಂಡಲದ ಅಧ್ಯಕ್ಷ ಸುಜಿತ್, ಪ್ರಧಾನ ಕಾರ್ಯದರ್ಶಿಗಳಾದ ವಿಪಿನ್, ಜ್ಯೋತಿಶ್, ಮಂಡಲದ ಪದಾಧಿಕಾರಿಗಳಾದ ಸುಬ್ರಮಣಿಯನ್, ಸುಧೀರ್, ಉಣ್ಣಿಕೃಷ್ಣನ್, ಪ್ರತ್ಯು, ಮಿರಾಶ್,
ಮಲಂಪುಳ ಗ್ರಾಮ ಪಂಚಾಯತಿ ಸದಸ್ಯರಾದ ಅಜೀಶ್, ಸುಮಿತ್ರಾ, ಸುಚಿತ್ರಾ, ಸಜಿತಾ, ಬಿಂದು ಮತ್ತು ಪಂಚಾಯತಿ ಅಧ್ಯಕ್ಷ ಪ್ರವೀಣ್ ನೇತೃತ್ವ ವಹಿಸಿದ್ದರು.



