HEALTH TIPS

ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್ಸ್ : ಆಯುಷ್ ಶೆಟ್ಟಿ, ಪಿ.ವಿ. ಸಿಂಧು ಪ್ರಿಕ್ವಾರ್ಟರ್‌ಫೈನಲ್‌ಗೆ

ನವದೆಹಲಿ: ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ಸ್‌ನಲ್ಲಿ ಬುಧವಾರ ಭಾರತದ ಆಯುಷ್ ಶೆಟ್ಟಿ ಮತ್ತು ಪಿ.ವಿ. ಸಿಂಧು ಅಂತಿಮ 16ರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. 


ಎರಡನೇ ಸುತ್ತಿನ ಪಂದ್ಯದಲ್ಲಿ 22ನೇ ವಿಶ್ವ ರ್ಯಾಂಕಿಂಗ್‌ನ ಆಯುಷ್ ಕೇವಲ 26 ನಿಮಿಷಗಳಲ್ಲಿ 87ನೇ ವಿಶ್ವ ರ್ಯಾಂಕಿಂಗ್‌ನ ಶ್ರೀಲಂಕಾದ ದುಮಿಂದು ಅಬೇವಿಕ್ರಮರನ್ನು 21-8, 21-10 ಗೇಮ್‌ಗಳಿಂದ ಸುಲಭವಾಗಿ ಮಣಿಸಿದರು.

ತನ್ನ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್ಸ್ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಹಾಗೂ ಅಗ್ರ ಶ್ರೇಯಾಂಕದ ಚೀನಾದ ಶಿ ಯು ಕಿ ಅವರಿಗೆ ಆಘಾತ ನೀಡಿರುವ 21 ವರ್ಷದ ಭಾರತೀಯ ಆಟಗಾರ ಆಯುಷ್, ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆಯಲು 11ನೇ ಶ್ರೇಯಾಂಕದ ಇಂಡೋನೇಶ್ಯದ ಅಲ್ವಿ ಫರ್ಹಾನ್ ಅವರನ್ನು ಎದುರಿಸಲಿದ್ದಾರೆ.

ಇದು 2023ರ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ಸ್‌ನ ಸೆಮಿಫೈನಲ್ ಪಂದ್ಯದ ಮರುಹೋರಾಟವಾಗಲಿದೆ.

ಮುನ್ನುಗ್ಗಿದ ಸಿಂಧು

ಮಹಿಳಾ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ, ಬುಧವಾರ ಮಾಜಿ ವಿಶ್ವ ಚಾಂಪಿಯನ್ ಸಿಂಧು, ಕೆನಡಾದ 49ನೇ ರ್ಯಾಂಕಿಂಗ್‌ನ ವೆನ್ ಯು ಜಾಂಗ್ ಅವರನ್ನು 21-16, 21-17 ನೇರ ಗೇಮ್‌ಗಳಿಂದ ಮಣಿಸಿ ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಪಂದ್ಯವು ಕೇವಲ 34 ನಿಮಿಷಗಳಲ್ಲಿ ಮುಕ್ತಾಯಗೊಂಡಿತು.

ಈ ಗೆಲುವಿನೊಂದಿಗೆ 31 ವರ್ಷದ ಭಾರತೀಯ ಆಟಗಾರ್ತಿಯು ಕೆನಡಾ ಆಟಗಾರ್ತಿಯ ವಿರುದ್ಧದ ಮುಖಾಮುಖಿ ದಾಖಲೆಯನ್ನು 3-0ಗೆ ಹೆಚ್ಚಿಸಿಕೊಂಡಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್ಸ್‌ನಲ್ಲಿ ಐದು ಬಾರಿ ಪದಕ ಗೆದ್ದಿರುವ ಸಿಂಧು ಮೊದಲ ಗೇಮ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು.

ಆದರೆ, ಎರಡನೇ ಗೇಮ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಜಾಂಗ್, ಗೇಮ್‌ನ ಮಧ್ಯಂತರದ ವಿರಾಮದ ವೇಳೆಗೆ 11-9ರ ಮುನ್ನಡೆ ಕಾಯ್ದುಕೊಂಡಿದ್ದರು.

ಆದಾಗ್ಯೂ, ಒಂಬತ್ತನೇ ಶ್ರೇಯಾಂಕದ ಭಾರತದ ಸಿಂಧು ತಾಳ್ಮೆ ಕಳೆದುಕೊಳ್ಳದೆ, 15-15 ರ ಸಮಬಲದ ನಂತರ ಕೇವಲ ಎರಡು ಪಾಯಿಂಟ್‌ಗಳನ್ನು ಮಾತ್ರ ಬಿಟ್ಟುಕೊಟ್ಟು ಸುಲಭವಾಗಿ ಗೆಲುವನ್ನು ತನ್ನದಾಗಿಸಿಕೊಂಡರು.

ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸಿಂಧು ಮೂರನೇ ಶ್ರೇಯಾಂಕದ ಚೀನಾದ ವಾಂಗ್ ಝಿ ಯಿ ಅವರನ್ನು ಎದುರಿಸಲಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ಸ್‌ನಲ್ಲಿ ಸಿಂಧು ಚೀನಾದ ಆಟಗಾರ್ತಿಯ ವಿರುದ್ಧ 8-0 ಅಜೇಯ ದಾಖಲೆಯನ್ನು ಹೊಂದಿದ್ದಾರೆ.

ಲಕ್ಷ್ಯ ಸೇನ್‌ಗೆ ಆಘಾತಕಾರಿ ಸೋಲು

ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ಸ್ ಪಂದ್ಯಾವಳಿಯಲ್ಲಿ, ಎರಡನೇ ಸುತ್ತಿನಲ್ಲಿ ಬುಧವಾರ ಭಾರತದ ಲಕ್ಷ್ಯ ಸೇನ್ ಆಘಾತಕಾರಿ ಸೋಲು ಅನುಭವಿಸಿದ್ದಾರೆ.

2021ರ ಆವೃತ್ತಿಯ ಕಂಚಿನ ಪದಕ ವಿಜೇತ ಸೇನ್, ತನ್ನ ಮೊದಲ ವಿಶ್ವ ಚಾಂಪಿಯನ್‌ಶಿಪ್ಸ್ ಆಡುತ್ತಿರುವ ಅಮೆರಿಕದ 18 ವರ್ಷದ ಗ್ಯಾರೆಟ್ ಟಾನ್ ವಿರುದ್ಧ 19-21, 21-19, 21-17 ಗೇಮ್‌ಗಳಿಂದ ಸೋತರು.

ಆದಾಗ್ಯೂ, 73 ನಿಮಿಷಗಳ ಕಾಲ ನಡೆದ ರೋಚಕ ಹಣಾಹಣಿಯಲ್ಲಿ ಅವರು ತೀವ್ರ ಪ್ರತಿ ಹೋರಾಟವನ್ನು ನೀಡಿದರು.

92ನೇ ವಿಶ್ವ ರ್ಯಾಂಕಿಂಗ್‌ನ ಟಾನ್ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 14ನೇ ಶ್ರೇಯಾಂಕದ ಭಾರತೀಯ ಆಟಗಾರನನ್ನು ಹಿಮ್ಮೆಟ್ಟಿಸಿದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries