HEALTH TIPS

ಜಿಲ್ಲೆಯಲ್ಲಿ ತಗ್ಗಿದ ಮಳೆ ಅಬ್ಬರ-ಇಂದು ಯೆಲ್ಲೋ ಅಲರ್ಟ್: ನಾಲ್ಕು ಸಂತ್ರಸ್ತರ ಶೀಬಿರ ಮುಚ್ಚುಗಡೆ

ಕಾಸರಗೋಡು: ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಸೋಮವಾರ ಮಳೆಯ ಬಿರುಸು ಅಲ್ಪ ಕಡಿಮೆಯಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಆ. 4ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 


ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ, ಎರಡು ತಾಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಟು ಸಂತ್ರಸ್ತರ ಪರಿಹಾರ ಶಿಬಿರಗಳ ಪೈಕಿ ನಾಲ್ಕನ್ನು ಮುಚ್ಚಲಾಗಿದೆ. ಹೊಸದುರ್ಗ ತಾಲೂಕಿನ ಚಾತಮತ್ ದೇವಾಲಯದ ಸಭಾಂಗಣ, ಕ್ಲಾಯಿಕೋಡ್ ನಾಯನಾರ್ ಮಂದಿರ ಮತ್ತು ಜಿಎಲ್‍ಪಿಎಸ್ ವೆಲ್ಲಾಟ್‍ನ ಶಿಬಿರ ಹಾಗೂ ವೆಲ್ಲರಿಕುಂಡು ತಾಲೂಕಿನ ದೇಶಸೇವನಿ ಗ್ರಂಥಾಲಯದ ಶಿಬಿರವನ್ನು ಮುಚ್ಚಲಾಗಿದೆ.

ಪ್ರಸಕ್ತ ವೆಳ್ಳರಿಕುಂಡು ತಾಲೂಕಿನಲ್ಲಿ ನಾಲ್ಕು ಶಿಬಿರ ಕಾರ್ಯನಿರ್ವಹಿಸುತ್ತಿದೆ. ಈ ಶಿಬಿರಗಳಲ್ಲಿ ಒಟ್ಟು 43 ಕುಟುಂಬಗಳ 155 ಮಂದಿ ಆಶ್ರಯ ಪಡೆದಿದ್ದು, ಇವರಲ್ಲಿ 68 ಪುರುಷರು, 64 ಮಹಿಳೆಯರು, 23 ಮಕ್ಕಳು, 13 ಹಿರಿಯ ನಾಗರಿಕರು ಮತ್ತು ಒಬ್ಬ ವಿಶೇಷಚೇತನ ವ್ಯಕ್ತಿ ಒಳಗೊಂಡಿದ್ದಾರೆ.

ನೀಲೇಶ್ವರಂ ನಗರಸಭಾ  ವ್ಯಾಪ್ತಿಯ ಪ್ರವಾಹ ಪೀಡಿತ ಚಾತಮತ್ ಪ್ರದೇಶ ಹಾಗೂ ಕಡಲ್ಕೊರೆತ ಪ್ರದೇಶ ವಲಿಯಪರಂಬಕ್ಕೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಭೇಟಿ ನೀಡಿ  ಪರಿಸ್ಥಿತಿ ಅವಲೋಕನ ನಡೆಸಿದರು. 

ಶಬರಿಮಲೆಯಲ್ಲಿ ಬಿರುಸಿನ ಮಳೆ, ಭೂಕುಸಿತ: 

ಭಾರೀ ಮಳೆಯಿಂದಾಗಿ ಪಂಬಾ ನದಿಯ ಪಾತ್ರದ ಹಲವು ಭಾಗಗಳಲ್ಲಿ ಭೂಕುಸಿತ ಉಂಟಾಗಿದೆ. ಅರಣ್ಯ ಪ್ರದೇಶಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಅರಣ್ಯ ಪ್ರದೇಶಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ನೀಲಕ್ಕಲ್ ಮತ್ತು ಅಟ್ಟತ್ತೋಡು ನಡುವೆ ಸಂಭವಿಸಿದ ಭಾರೀ ಭೂಕುಸಿತದಿಂದ ಮಣ್ಣುರಸ್ತೆಗೆ ಬಿದ್ದು ತಡೆಯುಂಟಾಗಿದ್ದ ಶಬರಿಮಲೆ ಮಾರ್ಗದ ಸಂಚಾರವನ್ನು ಪುನಃಸ್ಥಾಪಿಸಲಾಗಿದೆ. ಅಟ್ಟತ್ತೋಡಿನ ಕಡಿದಾದ ತಿರುವಿನಲ್ಲಿಈ ಭೂಕುಸಿತ ಸಂಭವಿಸಿತ್ತು; ರಸ್ತೆಯ ಮೇಲೆ ಭಾರಿಪ್ರಮಾಣದಲ್ಲಿ ಬಿದ್ದಿದ್ದ ಬಂಡೆಕಲ್ಲು, ಮರಗಳು ಹಾಗೂ ಮಣ್ಣನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ. 

ಕೃಷಿ ಸಮೃದ್ಧಿ ಮತ್ತು ಪ್ರಗತಿಗಾಗಿ ಭಗವಾನ್ ಅಯ್ಯಪ್ಪನಿಗೆ ಭತ್ತದ ಕದಿರುಗಳನ್ನು ಅರ್ಪಿಸುವ 'ಪುತ್ತರಿ' ಆಚರಣೆಗಾಗಿ ಶಬರಿಮಲೆ ದೇವಾಲಯದ ಬಾಗಿಲನ್ನು ಸೋಮವಾರ ಬೆಳಗ್ಗೆ ತೆರೆಯಲಾಗಿತ್ತು.  ಬೆಳಿಗ್ಗೆ 5.40 ರಿಂದ 6.20 ರವರೆಗಿನ ಶುಭ ಮುಹೂರ್ತದಲ್ಲಿ ಅಯ್ಯಪ್ಪ ದೇಗುಲದಲ್ಲಿ ನಿರಪುತ್ತರಿ ನೆರವೇರಿಸಲಾಯಿತು. ಹದಿನೆಂಟು ಮೆಟ್ಟಿಲಲ್ಲಿ ಭತ್ತದ ತನೆಯನ್ನಿರಿಸಿದ ನಂತರ ಗರ್ಭಗುಡಿಗೆ ತನೆ ಬಿಗಿದ ನಂತರ ಭಕ್ತಾದಿಗಳಿಗೆ ವಿತರಿಸಲಾಯಿತು. 

ಕೋಯಿಕ್ಕೋಡಿನಲ್ಲಿ 200ಕ್ಕೂಹೆಚ್ಚುಮನೆಗಳುಜಲಾವೃತವಾಗಿದ್ದರೆ, ಮಲಪ್ಪುರಂ ಜಿಲ್ಲೆಯ ವಿವಿಧೆಡೆ ಭಾರೀ ಭೂಕುಸಿತದಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries