ನವದೆಹಲಿ: ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್‌ನ (ಆರ್‌ಎಎಜಿ) ಕಂಪನಿಗಳು ಮತ್ತು ಮಾಜಿ ಉನ್ನತ ಅಧಿಕಾರಿಗಳು ಭಾಗಿಯಾಗಿರುವ ಎರಡು ಪ್ರತ್ಯೇಕ ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿರುವುದಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಭಾನುವಾರ ತಿಳಿಸಿದೆ.
ಮೊದಲ ಪ್ರಕರಣದಲ್ಲಿ, ದ್ವಾರಕಾದಲ್ಲಿರುವ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್‌ಎ) ವಿಶೇಷ ನ್ಯಾಯಾಲಯದಲ್ಲಿ ಶನಿವಾರದಂದು 'ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್', ರಿಲಯನ್ಸ್ ಗ್ರೂಪ್‌ನ ಮಾಜಿ ಅಧಿಕಾರಿ ಸತೀಶ್ ಸೇಠ್ ಮತ್ತು ಇತರರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಸತೀಶ್ ಸೇಠ್ ಅವರನ್ನು ಜೂನ್‌ನಲ್ಲಿ ಇಡಿ ಬಂಧಿಸಿತ್ತು. ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. 2025ರಲ್ಲಿ ರಿಲಯನ್ಸ್ ಗ್ರೂಪ್‌ನಿಂದ ಅವರು ಹೊರಬಂದಿದ್ದರು.
ರಿಲಯನ್ಸ್ ಕಮ್ಯುನಿಕೇಶನ್ಸ್ ಲಿಮಿಟೆಡ್‌ಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ರೋಸ್ ಅವೆನ್ಯೂ ವಿಶೇಷ ನ್ಯಾಯಾಲಯದಲ್ಲಿ ಇ.ಡಿ ಅಧಿಕಾರಿಗಳು ಪೂರಕ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದ ಮುಖ್ಯ ಚಾರ್ಜ್‌ಶೀಟ್ ಅನ್ನು ಮಾರ್ಚ್‌ನಲ್ಲಿ ಸಲ್ಲಿಕೆ ಮಾಡಲಾಗಿತ್ತು.
ಪಿಎಂಎಲ್‌ಎ ಅಡಿಯಲ್ಲಿ ದಾಖಲಿಸಲಾದ ಈ ದೂರಿನಲ್ಲಿ ಆರ್‌ಕಾಮ್, ರಿಲಯನ್ಸ್ ಟೆಲಿಕಾಂ ಲಿಮಿಟೆಡ್ ಹಾಗೂ ಆರ್‌ಎಎಜಿಯ ಮಾಜಿ ಅಧಿಕಾರಿಗಳಾದ ಸೇಠ್, ಗೌತಮ್ ದೋಷಿ, ಅಮಿತಾಭ್ ಝುಂಜುನ್‌ವಾಲಾ ಮತ್ತು ಇತರರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ ಎಂದು ಇ.ಡಿ ಹೇಳಿಕೆಯಲ್ಲಿ ತಿಳಿಸಿದೆ.
ದೋಷಿ ಅವರನ್ನು ಜೂನ್‌ನಲ್ಲಿ ಮತ್ತು ಸೇಠ್ ಅವರನ್ನು ಜುಲೈನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ದೋಷಿ ಅವರು 2020ರಲ್ಲಿ ಆರ್‌ಎಎಜಿಯಿಂದ ಹೊರಬಂದಿದ್ದರು.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುತ್ತಿಗೆ ನೀಡಿದ್ದ ನಾಲ್ಕು ಟೋಲ್ ರಸ್ತೆ ಯೋಜನೆಗಳಾದ ತಿರುಚಿ-ಕರೂರ್, ತಿರುಚಿ-ದಿಂಡಿಗಲ್, ಸೇಲಂ-ಉಲುಂದೂರ್‌ಪೇಟ್ ಮತ್ತು ಜೈಪುರ-ರೀಂಗಸ್ ಯೋಜನೆಗಳ ಹಣವನ್ನು ಬೇರೆಡೆಗೆ ವರ್ಗಾಯಿಸಲು ಒಂದು ಸಂಘಟಿತ ಯೋಜನೆ ರೂಪಿಸಲಾಗಿತ್ತು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

