HEALTH TIPS

Chhatron Ki Goonj | 'ಮಹಿಳೆ ಎಂದಿಗೂ ಸ್ವತಂತ್ರವಾಗಿರಬಾರದು' ಎನ್ನುವ ಮನುಸ್ಮೃತಿಯ ಉಲ್ಲೇಖ ನಾಚಿಕೆಗೇಡು: ರಾಹುಲ್ ಗಾಂಧಿ

ಪುಣೆ: ಭಾರತದ 70 ಕೋಟಿ ಮಹಿಳೆಯರು ದೇಶದ ಅತಿದೊಡ್ಡ ಆಸ್ತಿ. ಅವರು ಸ್ವತಂತ್ರವಾಗಿ ಬದುಕುವುದನ್ನು ತಡೆಯುವ ಹಿಂಸೆ ಮತ್ತು ಸಾಮಾಜಿಕ ನಿರ್ಬಂಧಗಳನ್ನು ಕೊನೆಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕರೆ ನೀಡಿದರು.


ಶನಿವಾರ ಪುಣೆಯಲ್ಲಿ ನಡೆದ 'ಛತ್ರೋನ್ ಕಿ ಗೂಂಜ್' ಕಾರ್ಯಕ್ರಮದ ಮಹಿಳೆಯರಿಗಾಗಿ ಆಯೋಜಿಸಿದ್ದ ವಿಶೇಷ ಆವೃತ್ತಿಯಲ್ಲಿ ಮಾತನಾಡಿದ ಅವರು, ಯುವಜನರಿಗೆ ಉಪನ್ಯಾಸ ನೀಡಲು ಅಥವಾ ರಾಜಕೀಯ ಚರ್ಚೆ ನಡೆಸಲು ಬಂದಿಲ್ಲ. ಅವರ ಮಾತುಗಳನ್ನು ಆಲಿಸಲು ಬಂದಿದ್ದೇನೆ ಎಂದರು.

ಮಹಿಳೆಯರು ಮಗಳು, ಪತ್ನಿ ಅಥವಾ ತಾಯಿ ಎಂಬ ಸಂಬಂಧದ ಗುರುತಿಗೆ ಮಾತ್ರ ಸೀಮಿತವಾಗಬಾರದು ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.

ಮನುಸ್ಮೃತಿಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಬಾಲ್ಯದಲ್ಲಿ ಮಹಿಳೆ ತಂದೆಯ ಅಧೀನದಲ್ಲಿರಬೇಕು, ಯೌವನದಲ್ಲಿ ಪತಿಯ ಅಧೀನದಲ್ಲಿರಬೇಕು ಹಾಗೂ ಬಳಿಕ ಪುತ್ರರ ಅಧೀನದಲ್ಲಿರಬೇಕು ಎಂಬ ಅದರಲ್ಲಿನ ಪ್ರತಿಪಾದನೆಯನ್ನು 'ನಾಚಿಕೆಗೇಡಿನ ವಿಚಾರ' ಎಂದರು.

'ಮಹಿಳೆ ಎಂದಿಗೂ ಸ್ವತಂತ್ರವಾಗಿರಬಾರದು ಎಂಬುದು ಮನುಸ್ಮೃತಿಯ ನೇರ ಉಲ್ಲೇಖ. ಈ ಪದಗಳು ನಾಚಿಕೆಗೇಡಿನವು. ಇಂತಹ ಪದಗಳನ್ನು ಎಂದಿಗೂ ಮಾತನಾಡಬಾರದು' ಎಂದ ಅವರು, ಮಹಿಳೆಯರು ಎದುರಿಸುವ ಹಿಂಸೆಯನ್ನು ಮೂರು ವಿಧಗಳಾಗಿ ರಾಹುಲ್ ಗಾಂಧಿ ವಿವರಿಸಿದರು. ನೇರ ದೈಹಿಕ ಹಿಂಸೆ, ಆರ್ಥಿಕ ಹಿಂಸೆ ಹಾಗೂ ಕಳೆದುಹೋದ ಅವಕಾಶಗಳಿಂದ ಉಂಟಾಗುವ ಹಿಂಸೆ ಎಂದರು.

ಹೆಣ್ಣು ಭ್ರೂಣಹತ್ಯೆ, ಕಿರುಕುಳ ಹಾಗೂ ದೈಹಿಕ ಮತ್ತು ಲೈಂಗಿಕ ಹಿಂಸೆಯ ಅಂಕಿಅಂಶಗಳನ್ನು ಉಲ್ಲೇಖಿಸಿದ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಭಾರತದಲ್ಲಿ ಪ್ರತಿ ವರ್ಷ ಸುಮಾರು 4.5 ಲಕ್ಷ ಹೆಣ್ಣುಮಕ್ಕಳು ಜನಿಸುವ ಮೊದಲೇ ಕೊಲ್ಲಲ್ಪಡುತ್ತಾರೆ ಎಂದು ಹೇಳಿದರು. ಸಾರ್ವಜನಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧೆಡೆ ಮಹಿಳೆಯರು ಕಿರುಕುಳ ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಶೇಕಡಾ 29-30ರಷ್ಟು ಮಹಿಳೆಯರು ದೈಹಿಕ ಹಿಂಸೆ ಎದುರಿಸುತ್ತಾರೆ ಹಾಗೂ ಪ್ರತಿ 100 ಮಹಿಳೆಯರಲ್ಲಿ ಆರು ಮಂದಿ ಲೈಂಗಿಕ ಹಿಂಸೆಗೆ ಒಳಗಾಗುತ್ತಾರೆ ಎಂಬ ಅಂಕಿಅಂಶಗಳನ್ನೂ ಅವರು ಉಲ್ಲೇಖಿಸಿದರು. ಸುರಕ್ಷತೆಯ ಕಾಳಜಿ ಮತ್ತು ಹಿಂಸೆಯ ಬೆದರಿಕೆಯಿಂದಾಗಿ ಶೇಕಡಾ 50ರಷ್ಟು ಮಹಿಳೆಯರು ಶಿಕ್ಷಣ ಅಥವಾ ಉದ್ಯೋಗ ತೊರೆಯುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದರು.

ಮಹಿಳೆಯರ ಸುರಕ್ಷತಾ ಕಾಳಜಿಯಿಂದ ಉಂಟಾಗುವ ಆರ್ಥಿಕ ಪರಿಣಾಮವನ್ನೂ ಹಿಂಸೆಯ ಮತ್ತೊಂದು ರೂಪವೆಂದು ಅವರು ವಿವರಿಸಿದರು. ಸರಾಸರಿ ಭಾರತೀಯ ಮಹಿಳೆ ಸುರಕ್ಷತಾ ಕ್ರಮಗಳಿಗಾಗಿ ವರ್ಷಕ್ಕೆ 17,500 ರೂ. ಖರ್ಚು ಮಾಡುತ್ತಾರೆ ಎಂದು ಹೇಳಿದರು.

'ಪಂಜರವನ್ನು ಮುರಿಯಬೇಕು' ಎಂದು ಕರೆ ನೀಡಿದ ರಾಹುಲ್ ಗಾಂಧಿ, ಯುವಜನರು ತಮ್ಮ ವೈಯಕ್ತಿಕ ಅಸ್ತಿತ್ವವನ್ನು ಒಪ್ಪಿಕೊಂಡು ತಮ್ಮದೇ ಕನಸು ಮತ್ತು ದೃಷ್ಟಿಕೋನದೊಂದಿಗೆ ಮುನ್ನಡೆಯಬೇಕು. 'ನೀವು ಅನನ್ಯರು, ನೀವು ವಿಶೇಷರು, ನೀವು ಒಬ್ಬ ವ್ಯಕ್ತಿ. ನಿಮಗೆ ನಿಮ್ಮದೇ ಆದ ಕನಸು ಮತ್ತು ದೃಷ್ಟಿಕೋನವಿದೆ' ಎಂದು ರಾಹುಲ್ ಗಾಂಧಿ ಕರೆ ನೀಡಿದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries