ಬಿಜೆಪಿ ರಾಷ್ಟ್ರಾಧ್ಯಕ್ಷರಾದ ನಿತಿನ್ ನಬಿನ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸ್ಮೃತಿ ಮತ್ತು ವಿನೋದ್ ತಾವ್ಡೆ, ಗುಜರಾತ್ ಸಚಿವ ಹರ್ಷ್ ಸಾಂಘ್ವಿ, ಛತ್ತೀಸ್ಗಢ ಸಚಿವ ಒ.ಪಿ.ಚೌಧರಿ ಹಾಗೂ ಇತರ ಹಲವು ನಾಯಕರು ಈ ಸಂಪರ್ಕ ಕಾರ್ಯಕ್ರಮದ ತಂಡದಲ್ಲಿದ್ದಾರೆ.
ಯುವ ಪೀಳಿಗೆಯೊಂದಿಗೆ ಹೆಚ್ಚು ನೇರ ಹಾಗೂ ನಿರಂತರ ಸಂವಾದವನ್ನು ಸ್ಥಾಪಿಸುವ ಪ್ರಯತ್ನದ ಭಾಗವಾಗಿ, ಬಿಜೆಪಿ ಜೆನ್ ಝಿಗಳೊಂದಿಗೆ ಈ ಸಂಪರ್ಕ ಕಾರ್ಯಕ್ರಮವನ್ನು ಶೀಘ್ರದಲ್ಲಿ ಪ್ರಾರಂಭಿಸುವ ನಿರೀಕ್ಷೆ ಇದೆ.
ಈ ಕಾರ್ಯಕ್ರಮ ಜೆನ್ ಝಿಗಳ ಆಕಾಂಕ್ಷೆ, ಕಳವಳ ಮತ್ತು ನಿರೀಕ್ಷೆಗಳನ್ನು ಅರ್ಥ ಮಾಡಿಕೊಳ್ಳುವುದರ ಬಗ್ಗೆ ಮುಖ್ಯವಾಗಿ ಗಮನಹರಿಸಲಿದೆ. ಜೊತೆಗೆ ಬಿಜೆಪಿ ನಾಯಕರೊಂದಿಗೆ ನೇರವಾಗಿ ಸಂವಹನ ನಡೆಸಲು ಮತ್ತು ತಮ್ಮನ್ನು ಕಾಡುವ ಸಮಸ್ಯೆಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇದು ವೇದಿಕೆಯನ್ನು ಕಲ್ಪಿಸಿಕೊಡಲಿದೆ.
ಸಂವಾದಗಳು, ಚರ್ಚೆಗಳು ಮತ್ತು ಇತರ ಸಂವಹನ ಚಟುವಟಿಕೆಗಳ ಮೂಲಕ ಯುವ ಮತದಾರರೊಂದಿಗೆ ತನ್ನ ಬಾಂಧವ್ಯವನ್ನು ಗಟ್ಟಿಗೊಳಿಸಲು ಹಾಗೂ ತನ್ನ ಸಂಪರ್ಕವನ್ನು ವಿಸ್ತರಿಸಿಕೊಳ್ಳಲು ಪಕ್ಷ ಈ ಕಾರ್ಯಕ್ರಮವನ್ನು ಬಳಸಿಕೊಳ್ಳುವ ನಿರೀಕ್ಷೆ ಇದೆ.
Gen Z ಸಂಪರ್ಕ ಕಾರ್ಯಕ್ರಮದ ವೇಳಾಪಟ್ಟಿ, ಸ್ವರೂಪ ಮತ್ತು ಸ್ಥಳಗಳಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆ ಇದೆ.

