HEALTH TIPS

ವಾಯು ಮಾಲಿನ್ಯದಿಂದ ಯುನೆಸ್ಕೋ ಪಾರಂಪರಿಕ ತಾಣ ಹುಮಾಯೂನ್ ಸಮಾಧಿಗೆ ಕಂಟಕ: IIT ವರದಿ

ನವದೆಹಲಿ: ವಾಯು ಮಾಲಿನ್ಯದ ಪರಿಣಾಮ ಯುನೆಸ್ಕೋ ಪಾರಂಪರಿಕ ತಾಣವಾದ ದೆಹಲಿಯ 'ಹುಮಾಯೂನ್ ಸಮಾಧಿ' ನಿಧಾನವಾಗಿ ಕಳೆಗುಂದುತ್ತಿದೆ.


ದೆಹಲಿಯ ಕಲುಷಿತ ಗಾಳಿಗೆ ವರ್ಷಗಳ ಕಾಲ ಒಡ್ಡಿಕೊಂಡಿದ್ದರಿಂದ ಕಟ್ಟಡದ ಕೆಂಪು ಮರಳುಗಲ್ಲಿನ ಮೇಲೆ ಕಪ್ಪು ಪದರ ರೂಪುಗೊಂಡಿದ್ದು, ಇದು ಸ್ಮಾರಕದ ಕ್ಷೀಣಿಸುವಿಕೆಯನ್ನು ವೇಗಗೊಳಿಸುತ್ತಿದೆ ಎಂದು ಐಐಟಿ ರೂರ್ಕಿ ಮತ್ತು ಐಐಟಿ ಕಾನ್ಪುರ ನಡೆಸಿದ ಜಂಟಿ ಅಧ್ಯಯನದಿಂದ ತಿಳಿದುಬಂದಿದೆ.

'ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಆರ್ಕಿಟೆಕ್ಚರಲ್ ಹೆರಿಟೇಜ್' ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಈ ಮಾಹಿತಿ ಬಹಿರಂಗೊಂಡಿದೆ. ಸಮಾಧಿಯ ವಿವಿಧ ಭಾಗಗಳಿಂದ ಕಪ್ಪು ಪದರದ ಮಾದರಿಗಳನ್ನು ಸಂಗ್ರಹಿಸಿ, ಅವುಗಳ ರಾಸಾಯನಿಕ ಹಾಗೂ ಸೂಕ್ಷ್ಮದರ್ಶಕ ಪರೀಕ್ಷೆಗಳನ್ನು ನಡೆಸಲಾಗಿತ್ತು.

ಕಪ್ಪು ಪದರ ರೂಪುಗೊಳ್ಳುವುದು ಹೇಗೆ?

ಅಧ್ಯಯನದ ಪ್ರಕಾರ, ಕಲುಷಿತ ಗಾಳಿಯಲ್ಲಿರುವ ಸಲ್ಫರ್ ಡೈಆಕ್ಸೈಡ್ ಅನಿಲವು ಧೂಳು ಹಾಗೂ ತೇವಾಂಶದೊಂದಿಗೆ ವರ್ತಿಸಿದಾಗ 'ಜಿಪ್ಸಮ್' ಎಂಬ ಖನಿಜ ಉತ್ಪತ್ತಿಯಾಗುತ್ತದೆ. ಈ ಜಿಪ್ಸಮ್ ವಾಹನಗಳ ಹೊಗೆ, ಕೈಗಾರಿಕಾ ಮಾಲಿನ್ಯ, ಕಟ್ಟಡ ನಿರ್ಮಾಣದ ಧೂಳು ಮತ್ತು ಸೌದೆ/ತ್ಯಾಜ್ಯ ಸುಡುವುದರಿಂದ ಬರುವ ಹೊಗೆಯನ್ನು ತನ್ನೊಳಗೆ ಹಿಡಿದಿಟ್ಟುಕೊಂಡು, ಮರಳುಗಲ್ಲಿನ ಮೇಲೆ ದಪ್ಪನೆಯ ಕಪ್ಪು ಪದರವನ್ನು ಸೃಷ್ಟಿಸುತ್ತಿದೆ.

ಮಳೆಯ ನೀರು ತಾಗದ ಭಾಗಗಳಲ್ಲೇ ಹೆಚ್ಚಿನ ಹಾನಿ

ಮಳೆ ನೀರು ಬೀಳುವ ಕಟ್ಟಡದ ಭಾಗಗಳಲ್ಲಿ ನೀರು ಮಾಲಿನ್ಯಕಾರಕಗಳನ್ನು ತೊಳೆದುಹಾಕುವುದರಿಂದ ಅಲ್ಲಿ ಕಪ್ಪು ಪದರ ಅಷ್ಟಾಗಿ ರೂಪುಗೊಂಡಿಲ್ಲ. ಆದರೆ ಸ್ಮಾರಕದ ಯಾವ ಭಾಗಗಳಿಗೆ ನೇರವಾಗಿ ಮಳೆ ಬೀಳುವುದಿಲ್ಲವೋ, ಅಲ್ಲಿಯೇ ಅತ್ಯಂತ ದಪ್ಪನೆಯ ಕಪ್ಪು ಪದರ ಸೃಷ್ಟಿಯಾಗಿದೆ. ಈ ಮಾಲಿನ್ಯಕಾರಕಗಳು ವರ್ಷಗಟ್ಟಲೆ ಶೇಖರಣೆಯಾಗಿ ಕಲ್ಲಿನ ಒಳಗಿನ ಗಡಸುತನವನ್ನು ದುರ್ಬಲಗೊಳಿಸುತ್ತಿವೆ.

ಕೇವಲ ಕಲೆಯಲ್ಲ, ಕಟ್ಟಡಕ್ಕೆ ಕಂಟಕ

ಸಂಶೋಧಕರ ಪ್ರಕಾರ, ಈ ಕಪ್ಪು ಪದರವು ಕೇವಲ ಮೇಲ್ಮೈಯ ಕಲೆಯಷ್ಟೇ ಅಲ್ಲ. ಈ ರಾಸಾಯನಿಕ ಕ್ರಿಯೆಯು ಕೆಂಪು ಮರಳುಗಲ್ಲನ್ನು ಒಳಗಿನಿಂದಲೇ ದುರ್ಬಲಗೊಳಿಸುತ್ತಿದ್ದು, ಹವಾಮಾನ ವೈಪರೀತ್ಯಕ್ಕೆ ತಡೆಯೊಡ್ಡುವ ಕಟ್ಟಡದ ಸಾಮರ್ಥ್ಯವನ್ನು ಕುಗ್ಗಿಸುತ್ತಿದೆ.

ಸಂಶೋಧಕರ ಶಿಫಾರಸುಗಳೇನು?

  • ರಸಾಯನಿಕ ಹಾಗೂ ವೈಜ್ಞಾನಿಕ ವಿಧಾನಗಳನ್ನು ಬಳಸಿ ಈ ಕಪ್ಪು ಪದರವನ್ನು ನಿಯತಕಾಲಿಕವಾಗಿ ತೆರವುಗೊಳಿಸಬೇಕು.

  • ಸ್ಮಾರಕದ ಸುತ್ತಮುತ್ತಲಿನ ವಾಯು ಮಾಲಿನ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು.

  • ವಾಹನಗಳಿಗೆ ಶುದ್ಧ ಇಂಧನ ಬಳಸಿ, ಮೂಲದಲ್ಲೇ ಮಾಲಿನ್ಯ ತಡೆಯುವ ಕ್ರಮಗಳನ್ನು ಕೈಗೊಳ್ಳಬೇಕು.

ಐತಿಹಾಸಿಕ ಮಹತ್ವ

ಮೊಘಲ್ ಚಕ್ರವರ್ತಿ ಹುಮಾಯೂನ್ ನೆನಪಿನಲ್ಲಿ ಅವರ ಪತ್ನಿ ಬೆಗಾ ಬೇಗಂ 16ನೇ ಶತಮಾನದಲ್ಲಿ ಈ ಭವ್ಯ ಸ್ಮಾರಕವನ್ನು ನಿರ್ಮಿಸಿದರು. ಈ ವಾಸ್ತುಶಿಲ್ಪದ ಶೈಲಿಯೇ ಮುಂದೆ ತಾಜ್ ಮಹಲ್ ಸೇರದಂತೆ ಅನೇಕ ಸ್ಮಾರಕಗಳ ನಿರ್ಮಾಣಕ್ಕೂ ಪ್ರೇರಣೆಯಾಯಿತು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries