HEALTH TIPS

Japan | ಪೂರ್ವ ಜಪಾನ್‌ನಲ್ಲಿ 5.9 ತೀವ್ರತೆಯ ಭೂಕಂಪ : ಕನಿಷ್ಠ 23 ಜನರಿಗೆ ಗಾಯ

ಟೋಕಿಯೊ: ಭಾನುವಾರ ಮುಂಜಾನೆ ಟೋಕಿಯೊ ಸೇರಿದಂತೆ ಪೂರ್ವ ಜಪಾನ್‌ನಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 23 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 


ಜಪಾನ್ ಹವಾಮಾನ ಸಂಸ್ಥೆಯ ಪ್ರಕಾರ, ಭೂಕಂಪವು ದಕ್ಷಿಣ ಇಬರಾಕಿ ಪ್ರಾಂತ್ಯದಲ್ಲಿ 70 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಈ ಪ್ರದೇಶದಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಿರುತ್ತವೆ.

ಈ ಪ್ರದೇಶದ ನಾಲ್ಕು ಪ್ರಾಂತ್ಯಗಳಲ್ಲಿ ಒಟ್ಟು 23 ಮಂದಿ ಗಾಯಗೊಂಡಿದ್ದಾರೆ. ಸೈತಾಮಾದಲ್ಲಿ 9 ಜನ, ಕನಗಾವಾದಲ್ಲಿ 9 ಜನ, ಚಿಬಾದಲ್ಲಿ 4 ಹಾಗೂ ಇಬರಾಕಿಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುನಾಮಿ ಅಪಾಯದ ಬಗ್ಗೆ ಯಾವುದೇ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿಲ್ಲ ಎಂದು ವರದಿಯಾಗಿದೆ.

ಭೂಕಂಪದಿಂದ ಸಂಭವಿಸಿದ ಹಾನಿಯ ಪ್ರಮಾಣವನ್ನು ನಿರ್ಣಯಿಸಲು ಸರಕಾರ ಕಾರ್ಯಪಡೆಯನ್ನು ಸ್ಥಾಪಿಸಿದೆ ಎಂದು ಜಪಾನ್‌ ಪ್ರಧಾನ ಮಂತ್ರಿ ಸನೇ ತಕೈಚಿ ಹೇಳಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries