HEALTH TIPS

Maharashtra | ಪಾಲ್ಘರ್ ನಲ್ಲಿ ಒಂದು ಗಂಟೆಯ ಅವಧಿಯಲ್ಲಿ ಎರಡು ಬಾರಿ ಭೂಕಂಪನ

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಒಂದು ಗಂಟೆಯಲ್ಲಿ ಅವಧಿಯಲ್ಲಿ ಬೆನ್ನುಬೆನ್ನಿಗೇ ಎರಡು ಭೂಕಂಪನಗಳು ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ. 


ಈ ಘಟನೆಯಲ್ಲಿ ಇದುವರೆಗೆ ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸಿದ ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಸೋಮವಾರ ರಾತ್ರಿ ಸಂಭವಿಸಿದ ಭೂಕಂಪನದ ಬಳಿಕ, ಕಳೆದ ಒಂದು ತಿಂಗಳಲ್ಲಿ ಪಾಲ್ಘರ್ ಜಿಲ್ಲೆಯಲ್ಲಿ ಸಂಭವಿಸಿರುವ ಮೂರನೆಯ ಭೂಕಂಪನ ಇದಾಗಿದೆ.

ಸೋಮವಾರ ರಾತ್ರಿ ಸುಮಾರು 10.04 ನಿಮಿಷಕ್ಕೆ ಮೊದಲ ಭೂಕಂಪನ ಸಂಭವಿಸಿತು. ಇದಾದ ಬಳಿಕ ರಾತ್ರಿ 11 ಗಂಟೆಗೆ ಮತ್ತೊಂದು ಭೂಕಂಪನ ಸಂಭವಿಸಿತು ಎಂದು ಜಿಲ್ಲಾ ಮಾಹಿತಿ ಕಚೇರಿ ತಿಳಿಸಿದೆ.

ಜೌಹಾರ್ ತಾಲ್ಲೂಕಿನಲ್ಲಿ 5 ಕಿಮೀ ಆಳದಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ವಿವೇಕಾನಂದ್ ಕದಂ ತಿಳಿಸಿದ್ದಾರೆ.

ಬೆನ್ನುಬೆನ್ನಿಗೇ ಭೂಕಂಪನ ಸಂಭವಿಸಿದ್ದರಿಂದ, ಸ್ಥಳೀಯ ನಿವಾಸಿಗಳು ಆತಂಕಕ್ಕೀಡಾದರು ಎಂದು ಅವರು ಹೇಳಿದ್ದಾರೆ. ಸ್ಥಳೀಯ ಪ್ರಾಧಿಕಾರಗಳು ಹಾಗೂ ವಿಪತ್ತು ನಿರ್ವಹಣಾ ತಂಡಗಳು ಪರಿಸ್ಥಿತಿಯನ್ನು ನಿಕಟವಾಗಿ ಅವಲೋಕಿಸುತ್ತಿವೆ ಎಂದೂ ಅವರು ತಿಳಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಪಾಲ್ಘರ್ ಜಿಲ್ಲೆಯಲ್ಲಿ ಕಡಿಮೆ ತೀವ್ರತೆಯ ಭೂಕಂಪನ ಸಂಭವಿಸುತ್ತಿರುವುದರಿಂದ, ಸ್ಥಳೀಯ ನಿವಾಸಿಗಳು ಸಂಯಮದಿಂದಿರಬೇಕು ಹಾಗೂ ಪ್ರಮಾಣೀಕೃತ ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂದು ಅಧಿಕಾರಿಗಳು ಕರೆ ನೀಡಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries