ಅಹಮದಾಬಾದ್: ಚುನಾವಣೆಯಲ್ಲಿ ಗೆದ್ದ ಬಳಿಕ ತಮ್ಮ ರಾಜಕೀಯ ಪಕ್ಷವನ್ನು 111 ಜನ ಪ್ರತಿನಿಧಿಗಳು ಬದಲಿಸಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ತಿಳಿಸಿದೆ.
111 ಚುನಾಯಿತ ಪ್ರತಿನಿಧಿಗಳ ಪೈಕಿ ಗುಜರಾತ್ನ ನಾಲ್ವರು ಶಾಸಕರಿದ್ದಾರೆ.
2022ರಿಂದ 2026ರ ನಡುವೆ ಚುನಾವಣೆಗಳಲ್ಲಿ ಗೆದ್ದ ಬಳಿಕ ಪಕ್ಷ ಬದಲಿಸಿದ ಚುನಾಯಿತ ಪ್ರತಿನಿಧಿಗಳ ವಿವರಗಳನ್ನು ADR ವಿಶ್ಲೇಷಿಸಿದೆ. ಸೆಪ್ಟೆಂಬರ್ 24ರಂದು ವರದಿ ಬಿಡುಗಡೆಯಾಗಿದ್ದು, ಜುಲೈ 12, 2026ರವರೆಗಿನ ದತ್ತಾಂಶವನ್ನು ಆಧರಿಸಿದೆ.
17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಒಟ್ಟು 111 ಚುನಾಯಿತ ಪ್ರತಿನಿಧಿಗಳು ವಿಶ್ಲೇಷಣೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಇವರಲ್ಲಿ 26 ಲೋಕಸಭಾ ಸದಸ್ಯರು, ಏಳು ರಾಜ್ಯಸಭಾ ಸದಸ್ಯರು ಮತ್ತು 78 ಶಾಸಕರು ಇದ್ದಾರೆ.
ಈ 111 ಚುನಾಯಿತ ಪ್ರತಿನಿಧಿಗಳ ಪೈಕಿ ಗುಜರಾತ್ನ ನಾಲ್ವರು ಶಾಸಕರಿದ್ದಾರೆ. ಈ ನಾಲ್ವರೂ ಕಾಂಗ್ರೆಸ್ ನಿಂದ ಚುನಾವಣೆಯಲ್ಲಿ ಗೆದ್ದಿದ್ದರು. ಬಳಿಕ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ನಂತರ ನಡೆದ ಉಪ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು ಎಂದು ADR ವರದಿ ತಿಳಿಸಿದೆ.

