HEALTH TIPS

ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವೈದ್ಯಗೆ ವಂಚನೆ-ಹೈದರಾಬಾದ್ ನಿಂದ ಆರೋಪಿಯ ಬಂಧಿಸಿದ ಸೈಬರ್ ಪೊಲೀಸರು- ಒಟ್ಟು 1.19ಕೋಟಿಗೂ ಮಿಕ್ಕಿದ ಹಣ ಪಡೆದು ವಂಚಿಸಿದ ಭೂಪ


ಕಾಸರಗೋಡು
: ಡಿಜಿಟಲ್ ಅರೆಸ್ಟ್ ಬೆದರಿಕೆಯೊಡ್ಡಿ 80ರ ಹರೆಯದ ವೈದ್ಯರಿಂದ 1.19 ಕೋಟಿಗೂ  ಹೆಚ್ಚು ಮೊತ್ತದ ಹಣ ದೋಚಿದ ಪ್ರಕರಣದ ಆರೋಪಿಯನ್ನು  ಹೈದರಾಬಾದ್ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾಸರಗೋಡು ಸೈಬರ್ ಠಾಣೆ ಪೆÇಲೀಸರ ತಂಡ ಬಂಧಿಸಿದೆ. ವಿದೇಶದಲ್ಲಿ ದುಡಿಯುತ್ತಿರುವ ಮಲ್ಪುರಂ ಮಲಪ್ಪುರಂ ಎಡಯಾಟೂರು ಚಿರಕತ್ ಹೌಸ್‍ನ ಶಮದ್ ಚಿರಕತ್ (34) ಬಂಧಿತ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತಿನ್‍ರಾಜ್ ನಿರ್ದೇಶ ಪ್ರಕಾರ ಕಾರ್ಯಚರಣೆ ನಡೆಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ನೀಲೇಶ್ವರ ನಿವಾಸಿಯಾಗಿರುವ 80ರ ಹರೆಯದ ವೈದ್ಯರನ್ನು ಫೆÇೀನ್ ಹಾಗೂ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಅವರಿಗೆ ಡಿಜಿಟಲ್ ಅರೆಸ್ಟ್ ಬೆದರಿಕೆಯೊಡ್ಡಿ 2025 ನವೆಂಬರ್ 24ರ ಕಾಲಾವಧಿಯಲ್ಲಿ ಅವರ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಣ ಎಗರಿಸಿದ ಬಗ್ಗೆ ವೈದ್ಯರು ನೀಡಿದ ದೂರಿನಂತೆ ಕಾಸರಗೋಡು ಸೈಬರ್ ಪೆÇಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡಿದ್ದರು. 

ಮುಂಬೈ ಪೆÇಲೀಸ್ ಕ್ರೈಂ ಬ್ರಾಂಚ್ ವಿಭಾಗದ ಅಧಿಕಾರಿಯ ಸೋಗಿನಲ್ಲಿ ವೈದ್ಯರನ್ನು ಸಂಪರ್ಕಿಸಿ, ನೀವು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವುದಾಗಿ ಮಾಹಿತಿ ಲಭಿಸಿದ್ದು,  ಡಿಜಿಟಲ್ ಅರೆಸ್ಟ್ ಕ್ರಮದಿಂದ ಹೊರತುಪಡಿಸಬೇಕಾದರೆ, ರಿಸರ್ವ್ ಬ್ಯಾಂಕ್‍ನ ಪರಿಶೀಲನೆಗಾಗಿ ಹಣ ನೀಡಬೇಕೆಂದು ನಂಬಿಸಿ ಅದರ ಹೆಸರಲ್ಲಿ ವೈದ್ಯರ ವಿವಿಧ

ಬ್ಯಾಂಕ್ ಖಾತೆಗಳ ಮೂಲಕ ಒಟ್ಟು 1,19,35,000 ರೂಪಾಯಿ ಎಗರಿಸಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಆರೋಪಿ ಪತ್ತೆಗಾಗಿ ಕಾಸರಗೋಡು ಸೈಬರ್ ಪೊಲೀಸರು ವಿಶೇಷ ತಂಡ ರಚಿಸಿದ್ದು, ಆರೋಪಿ ಪತ್ತೆಗಾಗಿ ದೇಶದ ನಾನಾ ವಿಮಾನ ನಿಲ್ದಾಣಗಳಲ್ಲಿ ಲುಕೌಟ್ ನೋಟೀಸು ಜಾರಿಗೊಳಿಸಲಾಗಿತ್ತು. ವಿದೇಶದಲ್ಲಿದ್ದ ಈತ 

ಸೆ.17ರಂದು ವಿಮಾನದಲ್ಲಿ ಹೈದರಾಬಾದ್‍ನ ರಾಜೀವ್ ಗಾಂಧಿ ಅಂಥರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅಲ್ಲಿನ ಎಮಿಗ್ರೇಷನ್ ಅಧಿಕಾರಿಗಳು ತಡೆದು   ಕಾಸರಗೋಡು ಸೈಬರ್ ಪೆÇಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries