HEALTH TIPS

ಬಾಣಂತಿ ಖಾಸಗಿ ದೃಶ್ಯಾವಳಿ ಗೌಪ್ಯ ಚಿತ್ರೀಕರಣ-ಆರೈಕೆಗೆ ಬಂಧಿದ್ದ ಮಹಿಳೆಯ ಬಂಧನ

ಕಾಸರಗೋಡು: ಹೆರಿಗೆ ಬಳಿಕ ವಿಶ್ರಾಂತಿಯಲ್ಲಿದ್ದ ಬಾಣಂತಿಯ ಖಾಸಗಿ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ವಾಟ್ಸಾಪ್ ಮೂಲಕ ಹಲವರಿಗೆ ಹಂಚಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಗರ ಠಾಣೆ ಪೆÇಲೀಸರು ಕರ್ನಾಟಕ ಮೂಲದ ಸುಲೇಖಾ ರಾಸಿಯಾ(25)ಎಂಬಾಕೆಯನ್ನು  ಬಂಧಿಸಿದ್ದಾರೆ.


ಕಾಸರಗೋಡು ಟೌನ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ 27ರ ಹರೆಯದ ಬಾಣಂತಿ ನೀಡಿದ ದೂರಿನನ್ವಯ ಈ ಬಂಧನ ನಡೆದಿದೆ. ತನ್ನ ಎರಡನೇ ಹೆರಿಗೆಂ ಸಂದರ್ಭ ಆರೈಕೆಗಾಗಿ ಸುಲೇಖಾ ಮನೆಗೆ ಬಂದಿದ್ದು, ಸೆಪ್ಟೆಂಬರ್ 7ರಿಂದ 20ರ ನಡುವಿನ ಕಾಲಾವಧಿಯಲ್ಲಿ ಆರೈಕೆಯ ನೆಪದಲ್ಲಿ ರಹಸ್ಯ ಕ್ಯಾಮೆರಾ ಬಳಸಿ ಬಾಣಂತಿಯ ಖಾಸಗಿ ದೃಶ್ಯ ಹಾಗೂ ಫೆÇೀಟೋಗಳನ್ನು ಸೆರೆಹಿಡಿದು ಹಲವರಿಗೆ ವಾಟ್ಸಾಪ್ ಮೂಲಕ ಕಳುಹಿಸಿಕೊಡಲಾಘಿದೆ. ದೃಶ್ಯಗಳನ್ನು ಪಡೆದವರ ಪೈಕಿ ಆರೋಪಿಯ ಪತಿಯೂ ಒಳಗೊಂಡಿರುವುದಾಗಿ ಮಾಹಿತಿಯಿದೆ.

ಆರೋಪಿ ಮಹಿಳೆಯ ಮೊಬೈಲ್ ಫೆÇೀನನ್ನು, ಬಾಣಂತಿ ಆಕಸ್ಮಿಕವಾಗಿ ಪರಿಶೀಲಿಸಿದಾಗ ತನ್ನ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿ ಹಂಚಿಕೊಂಡಿರುವ ವಿಚಾರ ಬೆಳಕಿಗೆ ಬಂದಿತ್ತು.  ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿ ಪೆÇಲೀಸರಿಗೆ ದೂರು ನೀಡಲಾಗಿದೆ. ಆರೋಪಿಯು ತನ್ನ ಪತಿಯೊಂದಿಗೆ ಸೇರಿ ಯುವತಿಯನ್ನು ಬ್ಲ್ಯಾಕ್‍ಮೇಲ್ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರುವ ಸಾಧ್ಯತೆಯಿದ್ದು, ಈ ಬಗ್ಗೆ ಪೆÇಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಕುರಿತು ಕಾಸರಗೋಡು ನಗರ ಠಾಣೆ ಪೆÇಲೀಸರು  ತನಿಖೆ ಚುರುಕುಗೊಳಿಸಿದ್ದು,   ದೃಶ್ಯಗಳ ಹಂಚಿಕೆ ಹಾಗೂ ಪ್ರಕರಣದಲ್ಲಿ ಇತರರ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿಸಿದ್ದಾರೆ. 






 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries