ಗುವಾಹತಿ: 2025ರ ಜುಲೈನಲ್ಲಿ 1,400 ಬಂಗಾಳಿ ಮೂಲದ ಮುಸ್ಲಿಂ ಕುಟುಂಬಗಳ ಮನೆಗಳನ್ನು ನೆಲಸಮಗೊಳಿಸಿದ ಅಸ್ಸಾಂನ ಧುಬ್ರಿ ಜಿಲ್ಲೆಯ ಜಾಗದಲ್ಲಿ ಅದಾನಿ ಪವರ್ ಲಿಮಿಟೆಡ್ ನಿರ್ಮಿಸಲಿರುವ ಉಷ್ಣ ವಿದ್ಯುತ್ ಯೋಜನೆಗೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರವಿವಾರ ಶಂಕುಸ್ಥಾಪನೆ ನೆರವೇರಿಸಿದರು.
ಈ ಯೋಜನೆಯು ಚಾಪರ್ ಕಂದಾಯ ವೃತ್ತದ ವ್ಯಾಪ್ತಿಗೆ ಒಳಪಡುವ ಚಾರುವಾಬಖ್ರಾ, ಚಿರಾಕುಟ 1 ಮತ್ತು 2 ಹಾಗೂ ಸಂತೋಷ್‌ಪುರ ಗ್ರಾಮಗಳಲ್ಲಿದೆ.
ವಿದ್ಯುತ್ ಯೋಜನೆಗೆ ಅವಕಾಶ ಮಾಡಿಕೊಡಲು 2025ರ ಜುಲೈನಲ್ಲಿ ಅಸ್ಸಾಂ ಸರಕಾರ ಈ ಗ್ರಾಮಗಳ ಸುಮಾರು 1,152 ಎಕರೆ ಸರಕಾರಿ ಭೂಮಿಯಲ್ಲಿ ವಾಸಿಸುತ್ತಿದ್ದ 1,400ಕ್ಕೂ ಹೆಚ್ಚು ಬಂಗಾಳಿ ಮೂಲದ ಮುಸ್ಲಿಂ ಕುಟುಂಬಗಳ ಮನೆಗಳನ್ನು ನೆಲಸಮಗೊಳಿಸಿತ್ತು.
ಅನಂತರ ಈ ಜಾಗವನ್ನು ಸರಕಾರಿ ಸ್ವಾಮ್ಯದ ಅಸ್ಸಾಂ ಪವರ್ ಡಿಸ್ಟ್ರಿಬ್ಯೂಷನ್ ಕಂಪೆನಿ ಲಿಮಿಟೆಡ್‌ಗೆ ಹಂಚಿಕೆ ಮಾಡಿತ್ತು. ಬಳಿಕ ಅದಾನಿ ಪವರ್ ಲಿಮಿಟೆಡ್‌ಗೆ ನೀಡಿತು.

