HEALTH TIPS

ಟೊರೊಂಟೊದಲ್ಲಿ ನಾಗಾಲ್ಯಾಂಡ್ನ 'ಆಂಗ್' ಚಿತ್ರಕ್ಕೆ ಪ್ರಶಸ್ತಿ; ನೇರವಾಗಿ ಆಸ್ಕರ್ ಸ್ಪರ್ಧೆಗೆ ಪ್ರವೇಶ

ನಾಗಾಲ್ಯಾಂಡ್ ವಿಶ್ವ ಸಿನಿಮಾದ ಅತಿದೊಡ್ಡ ವೇದಿಕೆಯೊಂದರಲ್ಲಿ ಗುರುತಿಸಿಕೊಂಡಿದೆ. ಮಾತ್ರವಲ್ಲದೆ, ಆಸ್ಕರ್ಗೆ ನೇರ ಪರಿಗಣನೆಗೆ ಪಾತ್ರವಾಗಿದೆ. 


ಯುವ ನಿರ್ದೇಶಕ ತೇಜಾ ರಿಯೊ ಅವರ ಚೊಚ್ಚಲ ನಿರ್ದೇಶನದ "ಆಂಗ್' ಸಿನಿಮಾವು 2026ರ ಟೊರಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (TIFF) ಪ್ಲಾಟ್ಫಾರ್ಮ್ ಪ್ರಶಸ್ತಿ ಗೆದ್ದಿದೆ. ಈ ಗೆಲುವು ಸಿನಿಮಾವನ್ನು 2027ರ ಅಸ್ಕರ್ ಪ್ರಶಸ್ತಿಗಳಲ್ಲಿ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಪರಿಗಣನೆಗೆ ಅರ್ಹವಾಗಿಸುತ್ತದೆ.

ಜಾಗತಿಕವಾಗಿ ತನ್ನ ಪ್ರಥಮ ಪ್ರದರ್ಶನವನ್ನು 'ಆಂಗ್' TIFF ನಲ್ಲಿ ನಡೆಸಿತು. ಅಲ್ಲಿ ಸ್ಪರ್ಧೆಗೆ ಆಯ್ಕೆಯಾಗಿದ್ದ ಏಕೈಕ ಭಾರತೀಯ ಚಲನಚಿತ್ರವಾಗಿತ್ತು. ಸಿನಿಮಾವು ತನ್ನ ಆಪ್ತವಾದ ಕಥಾಹಂದರ ಮತ್ತು ಕಣ್ಮರೆಯಾಗುತ್ತಿರುವ ಪ್ರಪಂಚದ ಚಿತ್ರಣಕ್ಕಾಗಿ ಉತ್ತಮ ಪ್ರತಿಕ್ರಿಯೆ ಪಡೆದಿದೆ.

ಪ್ಲಾಟ್ಫಾರ್ಮ್ ವಿಭಾಗವು TIFF ನಲ್ಲಿ ಪ್ರಮಿಖ ಸ್ಪರ್ಧಾತ್ಮಕ ವಿಭಾಗಗಳಲ್ಲಿ ಒಂದಾಗಿದೆ. 1960ರ ದಶಕದ ಆರಂಭದಲ್ಲಿ ನಾಗಾಲ್ಯಾಂಡ್ನ ದೂರದ ಹಳ್ಳಿಯೊಂದರ ಹಿನ್ನೆಲೆಯಲ್ಲಿ 'ಆಂಗ್' ಸಿನಿಮಾ ಮೂಡಿಬಂದಿದೆ. ಭಾರತ-ಬರ್ಮಾ ಗಡಿಯ ಬಳಿ ಇರುವ ಹಳ್ಳಿಯ ಕೊನೆಯ ಬದುಕುಳಿದ ಮುಖ್ಯಸ್ಥನಾದ 'ಅಂಗ್ಬಾ'ನ ಕತೆ ಹೇಳುತ್ತದೆ. ಹಳ್ಳಿಯ ಜನರು ಹಳ್ಳಿಯನ್ನು ತೊರೆದು ಹೋಗಿದ್ದರೂ ಆಂಗ್ಬಾ ತನ್ನ ಅನಾರೋಗ್ಯಪೀಡಿತ ಪತ್ನಿ ಮತ್ತು ಚಿಕ್ಕ ಮಗನೊಂದಿಗೆ ಉಳಿದುಕೊಳ್ಳುತಗ್ತಾನೆ. ಸುತ್ತಲ ಪ್ರಪಂಚ ಬದಲಾಗಲು ಪ್ರಾರಂಭಿಸಿದಾಗ ತಲೆಮಾರುಗಳಿಂದ ಬಳುವಳಿಯಾಗಿ ಬಂದ ನಂಬಿಕೆ, ಸಂಪ್ರದಾಯ ಮತ್ತು ಜೀವನ ವಿಧಾನ ಹಿಡಿದಿಟ್ಟುಕೊಳ್ಳಲು ಹೆಣಗಾಡುತ್ತಾನೆ.

ಅದೇ ಸಂದರ್ಭದಲ್ಲಿ ಆಗಮಿಸುವ ಅಮೆರಿಕನ್ ಮಿಷನರಿ ಹಳ್ಳಿಯಲ್ಲಿ ಚಲನೆಯನ್ನು ಸೃಷ್ಟಿಸುತ್ತದೆ. ಅಮೆರಿಕನ್ ಮಿಷನರಿ ಪಾತ್ರವನ್ನು ಡೌಗ್ಲಾಸ್ ಹೆನ್ಶಾಲ್ ನಿರ್ವಹಿಸಿದ್ದಾರೆ. ಚಿತ್ರದ ಹೃದಯ ಭಾಗದಲ್ಲಿ ಅಂಗ್ಬಾ ಮತ್ತು ಆತನ ಮಗನ ನಡುವಿನ ಸಂಬಂಧವಿದೆ.

ಈ ಸಿನಿಮಾವು ತಂದೆ-ಮಗನ ಸಂಬಂಧದ ಮೂಲಕ ಸಾಂಸ್ಕೃತಿಕ ಬದಲಾವಣೆಯನ್ನಯ ಅನ್ವೇಷಿಸುತ್ತದೆ. ನಂಬಿಕೆ, ಮನೆ, ಅನನ್ಯತೆ ಮತ್ತು ಎಲ್ಲವನ್ನೂ ಬಿಟ್ಟು ಮುನ್ನಡೆಯುವ ಪ್ರಶ್ನೆಗಳನ್ನು ಸಹ ಅವಲೋಕಿಸುತ್ತದೆ. ಸಂಘರ್ಷವನ್ನು ಸರಳ ಪದಗಳಲ್ಲಿ ಪ್ರಸ್ತುತಪಡಿಸುವ ಬದಲಾಗಿ ಬದಲಾವಣೆ ಹೇಗೆ ಕ್ರಮೇಣವಾಗಿ ಸಂಭವಿಸಬಹುದು ಎಂಬುದನ್ನು 'ಆಂಗ್' ತಿಳಿಸುತ್ತದೆ. ಮಿಷನರಿಯ ಪ್ರಭಾವ ಧರ್ಮದ ಮೂಲಕ ಮಾತ್ರವಲ್ಲದೆ, ಮೇಲ್ನೋಟಕ್ಕೆ ಸಣ್ಣದಾಗಿ ಕಾಣುವ ಸೌಜನ್ಯದ ನಡವಳಿಕೆಗಳು ಮತ್ತು ಭೌತಿಕ ಸೌಕರ್ಯಗಳ ಮೂಲಕವೂ ಬರುತ್ತದೆ.

ಸಿನಿಮಾದಲ್ಲಿ ಆಂಗ್ಲಾಂಗ್ ಕೊನ್ಯಾಕ್ ಪ್ರಮುಖ ಪಾತ್ರದಲ್ಲಿದ್ದಾರೆ. ಜೊತೆಗೆ ಡೌಗ್ಲಾಸ್ ಹೆನ್ಶಾಲ್, ಸೋಬಿನೊ ರೆಂಗ್ಮಾ, ಗೆನ್ಲೈ ಕೊನ್ಯಾಕ್, ಅಮಾಹ್ ಕೊನ್ಯಾಕ್ ಮತ್ತು ವಾಂಗ್ಟನ್ ಕೊನ್ಯಾಕ್ ಇದ್ದಾರೆ. ಚಿತ್ರಕತೆಯನ್ನು ತೇಜಾ ರಿಯೊ ಮತ್ತು ಜೇಮ್ಸ್ ಡೇವಿಸ್ ಬರೆದಿದ್ದಾರೆ.

ತೇಜಾ ರಿಯೊ ನಾಗಾಲ್ಯಾಂಡ್ನ ಚಿತ್ರ ನಿರ್ದೇಶಕರು ಮತ್ತು ಯುನೈಟೆಡ್ ಕಿಂಗ್ಡಂನ ನ್ಯಾಷನಲ್ ಫಿಲ್ಮ್ ಆಂಡ್ ಟೆಲಿವಿಜನ್ ಸ್ಕೂಲ್ನ ಪದವೀಧರರು. ಅವರು ಈಶಾನ್ಯ ಭಾರತದ ಕತೆಗಳು ಮತ್ತು ಧ್ವನಿಗಳನ್ನು ವಿಸ್ತೃತ ಪ್ರೇಕ್ಷಕರಿಗೆ ತರುವತ್ತ ಗಮನಹರಿಸಿದ್ದಾರೆ. ಆಂಗ್' ಬಿಡುಗಡೆಗೆ ಮೊದಲು ಅಚವಚರು ಡಿಸ್ಸೋಸಿಯೇಟ್, ಚೆಕ್ಪೋಸ್ಟ್, ಆನ್ ಎ ಸಂಡೆ ಸೇರಿದಂತೆ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ.

2021ರ ಕಿರುಚಿತ್ರವನ್ನೇ 'ಆಂಗ್' ಸಿನಿಮಾವಾಗಿ ಬದಲಿಸಿದ್ದಾರೆ. ಈ ಕಿರುಚಿತ್ರ ಕ್ಲರ್ಮಾಂಟ್- ಫೆರಾಮಡ್ ಅಂತರರಾಷ್ಟ್ರೀಯ ಕಿರುಚಿತ್ರ ಉತ್ಸವದಲ್ಲಿ ವಿಶೇಷ ತೀರ್ಪುಗಾರರ ಪ್ರಶಸ್ತಿ ಗೆದ್ದಿದೆ. ಕಿರುಚಿತ್ರವನ್ನು ನ್ಯಾನ್ಸಿ ನಿಸಾ ಬೆಸೊ ಮತ್ತು ರಿಯೊ ನಿರ್ಮಿಸಿದ್ದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries