HEALTH TIPS

ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ 14.88 ಶತಕೋಟಿ ಡಾಲರ್‌ಗಳಷ್ಟು ಇಳಿಕೆ: 2 ವರ್ಷಗಳಲ್ಲಿ ಅತ್ಯಧಿಕ ಕುಸಿತ

ನವದೆಹಲಿ: ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯು 14.88 ಶತಕೋಟಿ ಡಾಲರ್‌ಗಳಷ್ಟು ಇಳಿಕೆಯಾಗಿದ್ದು, ಇದು ಸುಮಾರು ಎರಡು ವರ್ಷಗಳಲ್ಲೇ ಅತ್ಯಂತ ದೊಡ್ಡ ಕುಸಿತವಾಗಿದೆ.


ಬ್ಲೂಮ್‌ಬರ್ಗ್ ಸಂಕಲಿಸಿರುವ ಇತ್ತೀಚಿನ ದತ್ತಾಂಶದ ಪ್ರಕಾರ, ಸೆಪ್ಟೆಂಬರ್ 18ಕ್ಕೆ ಕೊನೆಗೊಂಡ ವಾರದಲ್ಲಿ ವಿದೇಶಿ ವಿನಿಮಯ ಮೀಸಲು 14.88 ಶತಕೋಟಿ ಡಾ.ಗಳಷ್ಟು ಕುಸಿದು 765.9 ಶತಕೋಟಿ ಡಾ.ಗೆ ತಲುಪಿದೆ.

ಇದು 2024 ನವೆಂಬರ್ 15ರ ವಾರದ ನಂತರ ದಾಖಲಾದ ಅತಿ ದೊಡ್ಡ ಕುಸಿತವಾಗಿದೆ.

ಏಷ್ಯಾದಲ್ಲಿ ಈ ವರ್ಷ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವ ರೂಪಾಯಿಯನ್ನು ಬೆಂಬಲಿಸಲು ಆರ್‌ಬಿಐನಿಂದ ಡಾಲರ್ ಮಾರಾಟದ ಭರಾಟೆಯ ನಡುವೆ ವಿದೇಶಿ ವಿನಿಮಯ ಮೀಸಲಿನಲ್ಲಿ ಈ ಕುಸಿತ ದಾಖಲಾಗಿದೆ.

ಅಮೆರಿಕ-ಇಸ್ರೇಲ್ ಯುದ್ಧಕ್ಕೂ ಮುಂಚೆಯೇ ರೂಪಾಯಿ ನಿರಂತರವಾಗಿ ಕುಸಿಯುತ್ತ ಬಂದಿತ್ತು. ಯುದ್ಧವು ಈ ಕುಸಿತವನ್ನು ಮತ್ತಷ್ಟು ಹೆಚ್ಚಿಸಿದೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ ರೂಪಾಯಿ ಮೌಲ್ಯವು ಪ್ರತಿ ಅಮೆರಿಕನ್ ಡಾಲರ್‌ಗೆ 100 ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟಕ್ಕೆ ದುರ್ಬಲಗೊಳ್ಳಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಆರ್‌ಬಿಐ ಡಾಲರ್‌ಗಳನ್ನು ಆಕರ್ಷಿಸಲು ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಸಾಗರೋತ್ತರ ನಾಗರಿಕರಿಗಾಗಿ ವಿಶೇಷ ಠೇವಣಿ ಕಾರ್ಯಕ್ರಮವನ್ನೂ ಪರಿಚಯಿಸಿದ್ದು, ಇದು 143.6 ಶತಕೋಟಿ ಡಾ.ಗಳು ಬರುವಂತೆ ಮಾಡಿದೆ. ಆದರೆ ಈ ಕ್ರಮಗಳು ದುರ್ಬಲಗೊಳ್ಳುತ್ತಿರುವ ರೂಪಾಯಿಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಿಲ್ಲ.

ಆರ್‌ಬಿಐ ಈ ತಿಂಗಳ ಆರಂಭದಲ್ಲಿ ಬ್ಯಾಂಕ್‌ಗಳಿಂದ ಹಣವನ್ನು ಹಿಂಪಡೆಯಲು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸೆಲ್-ಬೈ ಸ್ವಾಪ್‌ಗಳನ್ನು (ವಿನಿಮಯದ ಮೂಲಕ ಮಾರಾಟ) ಸಹ ನಡೆಸಿದೆ. ಇದೂ ಮೀಸಲು ನಿಧಿಯ ಮೇಲೆ ಪರಿಣಾಮವನ್ನು ಹೊಂದಿದೆ.

ಈ ವರ್ಷದ ಮೇ ತಿಂಗಳಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ವಿನಿಮಯವನ್ನು ಸಂರಕ್ಷಿಸಲು ವಿದೇಶಿ ಪ್ರಯಾಣವನ್ನು ಕಡಿತಗೊಳಿಸುವಂತೆ, ಇಂಧನ ಬಳಕೆಯನ್ನು ಮಿತಿಗೊಳಿಸುವಂತೆ ಮತ್ತು ಒಂದು ವರ್ಷದವರೆಗೆ ಚಿನ್ನದ ಖರೀದಿಯಿಂದ ದೂರವಿರುವಂತೆ ಸಾರ್ವಜನಿಕ ಮನವಿಗಳನ್ನು ಮಾಡಿದ್ದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries