HEALTH TIPS

ಶೇರು ಹಿಡುವಳಿ ಉಲ್ಲಂಘನೆ ಪ್ರಕರಣ: 1.4 ಕೋಟಿ ರೂ.ಪಾವತಿಸಿ ಇತ್ಯರ್ಥಗೊಳಿಸಲು ಅದಾನಿ, ಗ್ರೂಪ್‌ನ ನಾಲ್ಕು ಕಂಪೆನಿಗಳಿಗೆ ಸೆಬಿ ಅನುಮತಿ

ನವದೆಹಲಿ:  ಕನಿಷ್ಠ ಸಾರ್ವಜನಿಕ ಶೇರು ಹಿಡುವಳಿ ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು 1.4 ಕೋ.ರೂ.ಗಳನ್ನು ಪಾವತಿಸಿ ಇತ್ಯರ್ಥಗೊಳಿಸಲು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, ಸಮೂಹದ ನಾಲ್ಕು ಕಂಪೆನಿಗಳು ಮತ್ತು ಇತರ 13 ಜನರಿಗೆ ಸೆಬಿ ಸೋಮವಾರ ಅನುಮತಿ ನೀಡಿದೆ.


ಭಾರತದಲ್ಲಿ ಶೇರು ವಿನಿಮಯ ಕೇಂದ್ರಗಳಲ್ಲಿ ನೋಂದಾಯಿತ ಕಂಪೆನಿಗಳು ಕನಿಷ್ಠ ಶೇ.25ರಷ್ಟು ಸಾರ್ವಜನಿಕ ಶೇರು ಹಿಡುವಳಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ಈ ನಿಯಮ ಪಾಲನೆಯಲ್ಲಿ ವೈಫಲ್ಯವನ್ನು ಆರೋಪಿಸಿ ಜೂನ್ 2020 ಮತ್ತು ಜುಲೈ 2020ರಲ್ಲಿ ಸ್ವೀಕರಿಸಿದ್ದ ದೂರುಗಳ ಮೇರೆಗೆ ಸೆಬಿ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪವರ್, ಅದಾನಿ ಪೋರ್ಟ್ಸ್ ಆಯಂಡ್ ಸ್ಪೆಷಲ್ ಇಕನಾಮಿಕ್ ರೆನ್ ಮತ್ತು ಅದಾನಿ ಟ್ರಾನ್ಸ್‌ಮಿಷನ್ (ಈಗ ಅದಾನಿ ಎನರ್ಜಿ ಸೊಲ್ಯೂಷನ್ಸ್) ಹಾಗೂ ಅವುಗಳ ನಿರ್ದೇಶಕರ ವಿರುದ್ಧ ಕ್ರಮಗಳನ್ನು ಆರಂಭಿಸಿತ್ತು.

ಅಮೆರಿಕದ ಶಾರ್ಟ್-ಸೆಲ್ಲರ್ ಹಿಂಡನ್‌ಬರ್ಗ್ ರೀಸರ್ಚ್ ಜನವರಿ 2023ರಲ್ಲಿ ವರದಿಯೊಂದನ್ನು ಪ್ರಕಟಿಸಿ, ಅದಾನಿ ಸಮೂಹವು ಲೆಕ್ಕಪತ್ರ ವಂಚನೆ, ಅಕ್ರಮ ಹಣ ವರ್ಗಾವಣೆ ಮತ್ತು ಕೃತಕವಾಗಿ ಶೇರು ಬೆಲೆಗಳನ್ನು ಹೆಚ್ಚಿಸುವ ಮೂಲಕ ಕಾರ್ಪೊರೇಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಂಚನೆ ನಡೆಸಿದೆ ಎಂದು ಆರೋಪಿಸಿತ್ತು. ಇದರ ನಂತರ ಅದಾನಿ ಸಮೂಹದ ವಿರುದ್ಧ ಸೆಬಿ ಕೈಗೆತ್ತಿಕೊಂಡ 24 ತನಿಖೆಗಳಲ್ಲಿ ಈ ಪ್ರಕ್ರಿಯೆಯೂ ಒಂದಾಗಿತ್ತು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಅದಾನಿ ಸಮೂಹವು ಹಿಂಡನ್‌ಬರ್ಗ್‌ನ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿತ್ತು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries