HEALTH TIPS

ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ₹1 ಕೋಟಿ ದೇಣಿಗೆ ನೀಡಿದ ಬೆಂಗಳೂರಿನ ಭಕ್ತ

ತಿರುಪತಿ(ಆಂಧ್ರ ಪ್ರದೇಶ): ಬೆಂಗಳೂರಿನ ಭಕ್ತರೊಬ್ಬರು ಶನಿವಾರ ಟಿಟಿಡಿಗೆ ₹1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಇದರಲ್ಲಿ ₹50 ಲಕ್ಷ ರೂಪಾಯಿ 'ಶ್ರೀ ವೆಂಕಟೇಶ್ವರ ಅನ್ನಪ್ರಸಾದಂ'ಗೆ ಮತ್ತು 'ಶ್ರೀ ವೆಂಕಟೇಶ್ವರ ಪ್ರಾಣದಾನಂ' ಟ್ರಸ್ಟ್‌ಗೆ ₹50 ಲಕ್ಷ ನೀಡಿದ್ದಾರೆ.. 


ಗಿರಿಯಪ್ಪ ದಯಾನಂದ ದೇಣಿಗೆ ನೀಡಿರುವ ಭಕ್ತ. ತಿರುಮಲದಲ್ಲಿರುವ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ. ವೆಂಕಯ್ಯ ಚೌಧರಿ ಅವರ ಕಚೇರಿಯಲ್ಲಿ ದೇಣಿಗೆಯ ಡಿಡಿಗಳನ್ನು ಹಸ್ತಾಂತರಿಸಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿಯ ಅಧಿಕೃತ ಪ್ರಕಟಣೆ ತಿಳಿಸಿದೆ.

'ಬೆಂಗಳೂರಿನ ಭಕ್ತರಾದ ಗಿರಿಯಪ್ಪ ದಯಾನಂದ ಅವರು, ಟಿಟಿಡಿಗೆ ಒಟ್ಟು ₹1 ಕೋಟಿ ದೇಣಿಗೆ ನೀಡಿದ್ದಾರೆ'ಎಂದು ಅದು ಹೇಳಿದೆ.

'ಶ್ರೀ ವೆಂಕಟೇಶ್ವರ ಅನ್ನಪ್ರಸಾದಂ' ಟ್ರಸ್ಟ್ ಅಡಿಯಲ್ಲಿ ಭಕ್ತರಿಗೆ ಉಚಿತ ಆಹಾರ ನೀಡಲಾಗುತ್ತದೆ.

ಸ್ಥಾಪಿತವಾದ 'ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್', ಹೃದಯ, ಮೂತ್ರಪಿಂಡ, ಮೆದುಳು, ಕ್ಯಾನ್ಸರ್ ಮತ್ತು ಇತರ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುವ ಗುರಿ ಹೊಂದಿದೆ.

ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವೆಂದು ಪರಿಗಣಿಸಲ್ಪಟ್ಟಿರುವ ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಾಲಯದ ನಿರ್ವಹಣೆಯನ್ನು ಟಿಟಿಡಿ ನೋಡಿಕೊಳ್ಳುತ್ತದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries