ಕುಂಬಳೆ: ಕುಂಬಳೆ ಪಂಚಾಯತಿ ಬಂಟರ ಸಂಘದ ವತಿಯಿಂದ ನ. 01 ರಂದು ಭಾನುವಾರ ಅಂಬಿಲಡ್ಕ ದೈವಸ್ಥಾನದ ಪರಿಸರದಲ್ಲಿ ನಡೆಯಲಿರುವ ಬಂಟರ ಪರ್ಬದ ಲಾಂಛನ ಬಿಡುಗಡೆ ಕಾರ್ಯಕ್ರಮ ಕಿದೂರು ಕ್ಷೇತ್ರದ ಪರಿಸರದಲ್ಲಿ ನೆರವೇರಿತು.
ಕಿದೂರು ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಅಧ್ಶಕ್ಷ, ಉದ್ಶಮಿ ವಿವೇಕ್ ಶೆಟ್ಟಿ ಕಿದೂರು ಗುತ್ತು ಲಾಂಛನ ಬಿಡುಗಡೆಗೊಳಿಸಿದರು. ಸಂಘದ ಅಧ್ಶಕ್ಷ ಸುರೇಶ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಹರೀಶ ಆಳ್ಟ, ಬಂಟರ ಪರ್ಬದ ಪದಾಧಿಕಾರಿಗಳಾದ ಶಂಕರ ಆಳ್ಟ, ಮಂಜುನಾಥ ಆಳ್ಟ, ಪೃಥ್ಟಿರಾಜ್ ಶೆಟ್ಟಿ, ಸುಖೇಶ ಭಂಡಾರಿ, ದಾಮೋಧರ ಶೆಟ್ಟಿ, ಪ್ರೇಮ ಶೆಟ್ಟಿ, ಪುಷ್ಪಲತಾ ಶೆಟ್ಟಿ, ಶ್ರೀನಿವಾಸ ಆಳ್ಟ, ಶಿವಪ್ರಸಾದ್ ರೈ, ಅನ್ನಪೂರ್ಣ ರೈ, ಭಾಗೀರಥಿ ಶೆಟ್ಟಿ, ಜನಾರ್ದನ ಶೆಟ್ಟಿ, ಮನೋರಾಜ್ ರೈ, ಬೇಬಿ ಶೆಟ್ಟಿ ಕಿದೂರು ಗುತ್ತು, ಉಷಾಕಿರಣ ಆಳ್ಟ, ಶಿವರಾಮ ಶೆಟ್ಟಿ, ಸೀತಾರಾಮ ಶೆಟ್ಟಿ, ಸುರೇಶ್ ಶೆಟ್ಟಿ. ಮಹೇಶ್ ಶೆಟ್ಟಿ ಕಾಜೂರು, ಚಂದ್ರರಾಜ ಶೆಟ್ಟಿ, ಮಹೇಶ್ ಶೆಟ್ಟಿ ಕಿದೂರು ಮುಂತಾದವರು ಉಪಸ್ಥಿತರಿದ್ದರು.

.jpg)
