HEALTH TIPS

ಕುಂಬಳೆ ಉಪಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಜ್ಯೂ, ಸೀನಿಯರ್ ಎರಡು ವಿಭಾಗಗಳಲ್ಲಿ ವಿಜಯದ ಕೀರೀಟ ಮುಡಿಗೇರಿಸಿದ ಶೇಣಿ ಶಾಲೆ

ಪೆರ್ಲ: ಕುಂಬಳೆ ಉಪಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಶೇಣಿ ಶ್ರೀಶಾರದಾಂಬ ಹೈಯರ್ ಸೆಕೆಂಡರಿ ಶಾಲಾ ಕ್ರೀಡಾಂಗಣದಲ್ಲಿ ಜರಗಿತು. ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಒಟ್ಟು 21 ತಂಡಗಳು ಭಾಗವಹಿಸಿದ್ದವು. ಪೈನಲ್ ಪಂದ್ಯಾಟದಲ್ಲಿ ಜ್ಯೂನಿಯರ್ ವಿಭಾಗದಲ್ಲಿ ಜಿವಿಎಚ್ ಎಸ್ ಆದೂರು ಶಾಲೆಯನ್ನು, ಸೀನಿಯರ್ ವಿಭಾಗದಲ್ಲಿ ಜಿಎಚ್.ಎಸ್. ಕುಂಬಳೆ ಶಾಲೆಗಳನ್ನು ಮಣಿಸಿ ಶೇಣಿ ಶ್ರೀ ಶಾರದಾಂಬ ಪ್ರೌಢ ಶಾಲಾ ವಿದ್ಯಾರ್ಥಿಗಳು ಎರಡು ವಿಭಾಗದಲ್ಲು ವಿಜೇತರಾದರು. ಜ್ಯೂನಿಯರ್ ವಿಭಾಗದಿಂದ ಅಭಿನವ್, ಜೊಯೆಲ್, ರಿಸಾನ್, ದಿಶಾಂತ್, ಸೀನಿಯರ್ ವಿಭಾಗದಿಂದ ಅನಿರುದ್ಧ್, ಶಶಾಂಕ್, ಶ್ರೀಜೇಶ್, ಮನ್ವಿತ್, ನಂದನ್, ಸುಪ್ರಿತ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ತಂಡಗಳನ್ನು ಶೇಣಿ ಶ್ರೀಶಾರದಾಂಬ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ರಕ್ಷಕ ಶಿಕ್ಷಕ ಸಂಘ ಅಭಿನಂದಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries