ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 23ನೇ ಚಾತುರ್ಮಾಸ್ಯ ಮಂಗಳೋತ್ಸವ ಹಾಗೂ 48 ಗಂಟೆಗಳ ಅಖಂಡ ಭಜನೋತ್ಸವ ಆರಂಭಗೊಂಡಿದೆ. ಬುಧವಾರ ಸೂಯರ್Áಸ್ತಕ್ಕೆ ಭಜನೋತ್ಸವದ ದೀಪ ಪ್ರಜ್ವಲನೆಯನ್ನು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನೆರವೇರಿಸಿ ಭಜನೆಗೆ ಚಾಲನೆ ನೀಡಿದರು. ಶುಕ್ರವಾರ ಸೂರ್ಯಾಸ್ತಕ್ಕೆ ಭಜನಾ ಮಂಗಳ, ಮಹಾಪೂಜೆ, 26 ರಂದು ಪ್ರಾತ:ಕಾಲ 5.30 ರಿಂದ ಶ್ರೀ ಗುರುಗಳಿಂದ ಸಂಸ್ಥಾನ ಪೂಜೆ, ಬಳಿಕ ನಕ್ಷತ್ರ ವನದ ಆನಂದ ತೀರ್ಥ ಪುಷ್ಕರಿಣಿಯಲ್ಲಿ ಮೃತ್ತಿಕಾ ವಿಸರ್ಜನೆ, ಬೆಳಿಗ್ಗೆ 7.30ಕ್ಕೆ ಮಹಾಪೂಜೆ, ಶ್ರೀ ಗುರುಗಳಿಂದ ಮಂತ್ರಾಕ್ಷತೆ ನಡೆಯಲಿದೆ.

.jpg)
