HEALTH TIPS

ಬಣ್ಣದಜ್ಜನ ಸ್ಮೃತಿಯಾನದ 21ನೆಯ ಕಾರ್ಯಕ್ರಮ ಬದಿಯಡ್ಕದಲ್ಲಿ ಸಂಪನ್ನ

ಬದಿಯಡ್ಕ: ಪರಂಪರೆಯ ಯಕ್ಷಗಾನ ಕ್ಷೇತ್ರದಲ್ಲಿ ಸರಿಸುಮಾರು ಏಳು ದಶಕಗಳ ಕಾಲ ಕರಾವಳಿಯ ನೀರವ ರಾತ್ರಿಗಳನ್ನು ಸಿಂಹ ಘರ್ಜನೆಯಿಂದ ನಡುಗಿಸಿದ ದೈತ್ಯಪ್ರತಿಭೆ ಬಣ್ಣದ ಮಾಲಿಂಗರು ಪುರಾಣದ ಅತಿಮಾನುಷ ಪಾತ್ರಗಳನ್ನು ಅತ್ಯಂತ ಸೃಜನಶೀಲವಾಗಿ ರಂಗದಲ್ಲಿ ಮರುಸೃಷ್ಟಿಗೊಳಿಸಿದವರು. ತನ್ನ ಪಾತ್ರ ನಿರ್ವಹಣೆಯಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದೆ ತನ್ನ ಅಪರಿಮಿತವಾದ ಶ್ರದ್ಧೆ, ಸೃಜನಶೀಲತೆ, ತಾಳ್ಮೆ ಮತ್ತು ವೃತ್ತಿಬದ್ಧತೆಯಿಂದಾಗಿ ಯಕ್ಷಗಾನ ಕ್ಷೇತ್ರದಲ್ಲಿ ಅಪರಾಜಿತರಾಗಿ ಬಾಳಿ ಬದುಕಿದ ಯಕ್ಷರಂಗದ ದಂತಕತೆ ಬಣ್ಣದ ಮಹಾಲಿಂಗರವರ ನೆನಪಿನಲ್ಲಿ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಪುತ್ತೂರು ಇವರು ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ `ಬಣ್ಣದಜ್ಜನ ಸ್ಮೃತಿ ಯಾನ-ಬಣ್ಣದ ಮಹಾಲಿಂಗರವರ ನೆನಪಿನಲ್ಲೊಂದು ಯಕ್ಷಪಯಣ' ಎಂಬ ಪ್ರತಿ ತಿಂಗಳ ಸರಣಿ ಕಾರ್ಯಕ್ರಮದ 21 ನೆಯ ಆವೃತ್ತಿಯು ಬದಿಯಡ್ಕದ ವಾಣಿಯ ಗಾಣಿಗ ಸಭಾ ಪ್ರಾಯೋಜಕತ್ವದಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು. 


ವಾಣಿಯ ಗಾಣಿಗ ಸಭಾ ಬದಿಯಡ್ಕ ಇದರ ಅಧ್ಯಕ್ಷ ಭಾಸ್ಕರ ಪಿಲಾಂಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿಯವರು ಬಣ್ಣದ ಮಹಾಲಿಂಗರವರ ಸಂಸ್ಮರಣೆಗೈದರು. ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಮಹಾಪೋಷಕ ಮತ್ತು ರಬ್ಬರ್ ಬೋರ್ಡಿನ ನಿವೃತ್ತ ಆಯುಕ್ತ ಬಾಲಕೃಷ್ಣ ಬೀಜಂತಡ್ಕ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಹಿರಿಯ ಕಲಾವಿದ ನಾರಾಯಣ ಮೂಲಡ್ಕ ಅವರಿಗೆ 21 ನೆಯ ಬಣ್ಣದ ಮಹಾಲಿಂಗ ಯಕ್ಷ ಸ್ಮೃತಿ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಹಿರಿಯ ಕಲಾವಿದರು ಮತ್ತು ಕಾಸರಗೋಡು ತಾಲೂಕು ಜನಜಾಗೃತಿ ಸಮಿತಿಯ ಅಧ್ಯಕ್ಷ ಜಯರಾಮ ಪಾಟಾಳಿ ಪಡುಮಲೆ ಅಭಿನಂದನ ಭಾಷಣಗೈದರು. ಪ್ರತಿಷ್ಠಾನದ ಖಜಾಂಚಿ ರವಿಶಂಕರ ಪಳ್ಳತ್ತಡ್ಕ ಮತ್ತು ಸ್ಮೃತಿಯಾನದ ವಲಯ ಸಂಚಾಲಕ ರಾಮಚಂದ್ರ ಬೆಳ್ಳಿಗೆ ಶುಭಾಶಂಸನೆಗೈದರು. ವಾಣಿಯ ಗಾಣಿಗ ಸಭಾದ ಜಿಲ್ಲಾ ಕಾರ್ಯದರ್ಶಿ ರತ್ನಾಕರ ಎಸ್ ಓಡಂಗಲ್ಲು ಸ್ವಾಗತಿಸಿ, ನಿವೃತ್ತ ಪ್ರಾಂಶುಪಾಲ ಡಾ. ವೈ ಶಂಕರ ಪಾಟಾಳಿ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries