ಬದಿಯಡ್ಕ: ಉದಯಗಿರಿ ಬಾಂಜತ್ತಡ್ಕ ಭಗತ್ ಸಿಂಗ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್‍ನ 26ನೇ ವಾರ್ಷಿಕೋತ್ಸವ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಉದಯಗಿರಿ ಶಾಲಾ ವಠಾರದಲ್ಲಿ ಜರಗಿತು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ದೀಪಬೆಳಗಿಸಿ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ ಭಟ್ ಬಿ. ಉಪಸ್ಥಿತರಿದ್ದು ಮಾತನಾಡಿದರು. ರವಿ ಕೈಲಂಕಜೆ, ಕೃಷ್ಣಕುಮಾರ, ವಸಂತ ಕುಮಾರ್, ಸತ್ಯಪ್ರಕಾಶ ಮೊದಲಾದವರು ಪಾಲ್ಗೊಂಡಿದ್ದರು. ವಿವಿಧ ಸ್ಪರ್ಧೆಗಳು ಜರಗಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಗಣ್ಯರು ಪಾಲ್ಗೊಂಡಿದ್ದರು.

.jpg)
