HEALTH TIPS

ನಾಗಾ ಸಮುದಾಯದ 39 ಮಾನವ ಅವಶೇಷಗಳನ್ನು ಮರಳಿಸಲು ಆಕ್ಸ್‌ಫರ್ಡ್ ವಿವಿ ಒಪ್ಪಿಗೆ

ನವದೆಹಲಿ: ವಸಾಹತುಶಾಹಿ ಆಳ್ವಿಕೆಯ ಅವಧಿಯಲ್ಲಿ ಒಯ್ದಿದ್ದ ಮತ್ತು ದಶಕಗಳ ಕಾಲ ಪ್ರದರ್ಶನಕ್ಕಿಡಲಾಗಿದ್ದ ನಾಗಾ ಜನರಿಗೆ ಸೇರಿದ 39 ಮಾನವ ಅವಶೇಷಗಳನ್ನು ಮರಳಿ ನೀಡಲು ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿಯು ಒಪ್ಪಿಕೊಂಡಿದೆ.


ಆಕ್ಸ್‌ಫರ್ಡ್ ವಿವಿಯ ಸಂಗ್ರಹಗಳನ್ನು ಹೊಂದಿರುವ ಪಿಟ್ ರಿವರ್ಸ್ ಮ್ಯೂಸಿಯಂ ವಿಶ್ವದಲ್ಲೇ ಅತಿ ದೊಡ್ಡ ನಾಗಾ ಸಂಗ್ರಹವನ್ನು ಹೊಂದಿದೆ.

ಇದು ಮುಖ್ಯವಾಗಿ ತಲೆಬುರುಡೆಗಳು ಸೇರಿದಂತೆ ಮಾನವ ಅವಶೇಷಗಳು ಮತ್ತು ಮಾನವನ ಕೂದಲನ್ನು ಹೊಂದಿರುವ ಅಥವಾ ಹೊಂದಿರಬಹುದಾದ 178 ವಸ್ತುಗಳು ಸೇರಿದಂತೆ ಸುಮಾರು 8,000 ನಾಗಾ ವಸ್ತುಗಳನ್ನು ಹೊಂದಿದೆ.

ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಈ ಸಂಗ್ರಹಾಲಯವು 2020ರಲ್ಲಿ ಎಲ್ಲಾ ಮಾನವ ಅವಶೇಷಗಳನ್ನು ಸಾರ್ವಜನಿಕ ಪ್ರದರ್ಶನದಿಂದ ತೆಗೆದುಹಾಕಿತ್ತು.

ಬ್ರಿಟನ್ ಮತ್ತು ಇತರ ಮಾಜಿ ವಸಾಹತುಶಾಹಿ ಶಕ್ತಿಗಳು ಏಷ್ಯಾ, ಆಫ್ರಿಕಾ ಮತ್ತು ಇತರೆಡೆಯಿಂದ ತಲೆಬುರುಡೆಗಳು ಮತ್ತು ಇತರ ದೇಹದ ಭಾಗಗಳನ್ನು ಗೆಲುವಿನ ಸ್ಮಾರಕಗಳಾಗಿ ತೆಗೆದುಕೊಂಡು ಹೋಗುತ್ತಿದ್ದವು ಮತ್ತು ಅವುಗಳನ್ನು ಮಾರಾಟ ಮಾಡಲಾಗುತ್ತಿತ್ತು, ಪ್ರದರ್ಶಿಸಲಾಗುತ್ತಿತ್ತು ಅಥವಾ ಅಧ್ಯಯನ ಮಾಡಲಾಗುತ್ತಿತ್ತು.

ವಸಾಹತುಶಾಹಿ ಮತ್ತು ಗುಲಾಮಗಿರಿಗೆ ಪರಿಹಾರವನ್ನು ಕೋರುವ ವಿಶಾಲ ಚಳುವಳಿಯ ಭಾಗವಾಗಿ ಅಂತಹ ಮಾನವ ಅವಶೇಷಗಳು ಹಾಗೂ ಕಳವು ಮಾಡಲಾದ ಕಲೆ ಮತ್ತು ಕರಕುಶಲ ವಸ್ತುಗಳನ್ನು ಆಯಾ ಸಮುದಾಯಗಳಿಗೆ ಹಿಂದಿರುಗಿಸಬೇಕು ಎಂಬ ಕರೆಗಳು ವಿಶ್ವಾದ್ಯಂತ ಹೆಚ್ಚುತ್ತಿವೆ.

ಶನಿವಾರ ನಾಗಾ ಬುಡಕಟ್ಟು ಹೋಬೋಸ್ ಮತ್ತು ಫೋರಮ್ ಫಾರ್ ನಾಗಾ ರಿಕನ್ಸಾಯ್ಲಿಯೇಷನ್ ಜಂಟಿ ಹೇಳಿಕೆಯಲ್ಲಿ, ಪೂರ್ವಜರ ಅವಶೇಷಗಳನ್ನು ಪಡೆದುಕೊಳ್ಳಲು ನಾಗಾ ಪ್ರತಿನಿಧಿಗಳ ನಿಯೋಗವು ಪಿಟ್ ರಿವರ್ಸ್ ಮ್ಯೂಸಿಯಂಗೆ ಪ್ರಯಾಣ ಬೆಳೆಸಲಿದೆ ಎಂದು ತಿಳಿಸಿವೆ.

ನವೆಂಬರ್‌ನಲ್ಲಿ ನಿಗದಿಯಾಗಿರುವ ಈ ಹಸ್ತಾಂತರವು ಮ್ಯೂಸಿಯಂನಿಂದ ಮಾನವ ಅವಶೇಷಗಳ ಅತಿ ದೊಡ್ಡ ಮರಳಿಕೆಯಾಗಲಿದೆ ಎಂದು ಪಿಟ್ ರಿವರ್ಸ್ ನಿರ್ದೇಶಕಿ ಲಾರಾ ವ್ಯಾನ್ ಬ್ರೋಖೋವೆನ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ನಾಗಾ ಪ್ರತಿನಿಧಿಗಳು ಈ ಅವಶೇಷಗಳನ್ನು ವಾಪಸ್ ನೀಡುವಂತೆ ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದು, ಪಿಟ್ ರಿವರ್ಸ್ ಮ್ಯೂಸಿಯಂನೊಂದಿಗೆ ಔಪಚಾರಿಕ ಚರ್ಚೆಗಳು 2020ರಲ್ಲಿ ಆರಂಭಗೊಂಡಿದ್ದವು.

ಮರಳಿಸುವಿಕೆ ಪ್ರಕ್ರಿಯೆಯ ಭಾಗವಾಗಿ, 2025ರಲ್ಲಿ ನಾಗಾ ಪ್ರತಿನಿಧಿಗಳ ತಂಡವು ಮಾತುಕತೆಗಾಗಿ ಮ್ಯೂಸಿಯಂಗೆ ಭೇಟಿ ನೀಡಿತ್ತು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries