HEALTH TIPS

ಪ್ರತಿವರ್ಷ 4.5 ಲಕ್ಷ ಹುಡುಗಿಯರು ಹಿಂದೂಯೇತರರೊಂದಿಗೆ ಪರಾರಿ: ಬಿಜೆಪಿ ಶಾಸಕಿ ಉಷಾ

ಇಂದೋರ್‌: 'ನವರಾತ್ರಿ ಸಮಯದಲ್ಲಿ ಹಮ್ಮಿಕೊಳ್ಳುವ ಗರ್ಬಾ ನೃತ್ಯದ ವೇಳೆ ದೇಶದಲ್ಲಿ ಪ್ರತಿ ವರ್ಷ 4.5 ಲಕ್ಷ ಹುಡುಗಿಯರು ಹಿಂದೂಯೇತರ ಪುರುಷರೊಂದಿಗೆ ಓಡಿ ಹೋಗುತ್ತಾರೆ. ಇದು ಜನಸಂಖ್ಯೆ ಸ್ವರೂಪದಲ್ಲಿನ ಬದಲಾವಣೆಗೆ ಕಾರಣ ವಾಗುತ್ತಿದೆ' ಎಂದು ಮಧ್ಯಪ್ರದೇಶದ ಬಿಜೆಪಿ ಶಾಸಕಿ ಉಷಾ ಠಾಕೂರ್‌ ಹೇಳಿದ್ದಾರೆ.


ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಗರ್ಬಾ ನೃತ್ಯ ನಡೆಯುವ ಪೆಂಡಾಲ್‌ಗಳಿಗೆ ಹಿಂದೂಯೇತರರಿಗೆ ಪ್ರವೇಶ ನಿಷೇಧಿಸಬೇಕು ಎಂಬುದನ್ನು ಸಮರ್ಥಿಸಿಕೊಂಡ ಸಂದರ್ಭದಲ್ಲಿ ಅವರು ಈ ಮಾತು ಹೇಳಿದ್ದಾರೆ.

ಇದರ ಬೆನ್ನಲ್ಲೇ, ಉಷಾ ಠಾಕೂರ್‌ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್‌ ಪಕ್ಷ, 'ಇದು ಹಿಂದೂ ಮಹಿಳೆಯರ ಅಸ್ಮಿತೆಗೆ ಮಾಡಿದ ಅವಮಾನ' ಎಂದಿದೆ.

'ಇಂತಹ ಹೇಳಿಕೆ ಮೂಲಕ ಉಷಾ ಠಾಕೂರ್‌ ಅವರು ಹಿಂದೂ ಮಹಿಳೆಯರನ್ನು ಅವಮಾನಿಸುತ್ತಿದ್ದಾರೆ. ಯಾವುದೇ ಸಾಕ್ಷ್ಯ ಗಳು ಇಲ್ಲದೆ ಅವರ ಚಾರಿತ್ರ್ಯವಧೆ ಮಾಡುತ್ತಿದ್ದು, ಇಂತಹ ಹೇಳಿಕೆಗಾಗಿ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು' ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಸಮನ್ವಯಕಾರ ನೀಲಭ್ ಶುಕ್ಲಾ ಆಗ್ರಹಿಸಿದ್ದಾರೆ.

ಉಷಾ ಅವರು ಡಾ. ಅಂಬೇಡ್ಕರ್‌ ನಗರ-ಮಹೂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿ ರಾಜ್ಯ ಘಟಕದ ವಕ್ತಾರರೂ ಆಗಿರುವ ಅವರು, ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ.

ಗರ್ಬಾ ನೃತ್ಯದಲ್ಲಿ ಪಾಲ್ಗೊಳ್ಳಲು ಹಿಂದೂಯೇತರ ಪುರುಷರಿಗೆ ಅವಕಾಶ ನೀಡಬಾರದು ಎಂಬ ಒತ್ತಾಯದ ಕುರಿತು ಮಾತನಾಡಿದ್ದ ಅವರು, 'ಮೂರ್ತಿ ಪೂಜೆ ಮಾಡದವರಿಗೆ ಗರ್ಬಾ ನೃತ್ಯ ನಡೆಯುವ ಪೆಂಡಾಲ್‌ಗಳಿಗೆ ಪ್ರವೇಶ ನೀಡಬಾರದು' ಎಂದು ಹೇಳಿದ್ದರು.

'ಕೆಲವೊಮ್ಮೆ ಇವರು (ಹಿಂದೂಯೇತರರು) ಕುಂಕುಮ ಹಾಗೂ 'ಕಲವಾ' (ರಕ್ಷಾ ಸೂತ್ರ) ಧರಿಸಿ ಗರ್ಬಾ ನೃತ್ಯ ಸೇರಿದಂತೆ ನಮ್ಮ ಹಬ್ಬಗಳಲ್ಲಿ ಪಾಲ್ಗೊಳ್ಳುತ್ತಾರೆ. ಹಿಂದೂ ಹುಡುಗಿಯರ ದಾರಿ ತಪ್ಪಿಸಿ, ನಂತರ ಅವರ ಬಾಳನ್ನು ನರಕ ಮಾಡುತ್ತಾರೆ' ಎಂದೂ ದೂರಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries