ಬದಿಯಡ್ಕ: ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ 48ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಅಪೂರ್ವ ಸಮ್ಮಿಲನದೊಂದಿಗೆ ಸಂಪನ್ನಗೊಂಡಿತು. ಭಕ್ತಿಭಾವ, ಸಂಭ್ರಮ ಮತ್ತು ಸಂಸ್ಕøತಿಯ ಸೊಬಗಿನಿಂದ ಕಂಗೊಳಿಸಿದ ಈ ವರ್ಷದ ಜನ್ಮಾಷ್ಟಮಿ ಮಹೋತ್ಸವವು ಎಲ್ಲರ ಮನದಲ್ಲಿ ಅಚ್ಚಳಿಯದೆ ನೆನಪಾಗಿ ಉಳಿಯುವಂತಾಯಿತು. ಶ್ರೀಕೃಷ್ಣನ ಬಾಲಲೀಲೆಗಳನ್ನು ನೆನಪಿಸಬಲ್ಲ ವಿವಿಧ ಸ್ಪರ್ಧೆಗಳು, ಭಜನಾ ಸಂಕೀರ್ತನೆ, ವೈದಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಶಾಸ್ತ್ರೀಯ ಸಂಗೀತ, ಭಕ್ತಿಸೌರಭ, ಗಾನ ವೈಭವ, ಯಕ್ಷಗಾನಗಳು ಜನ್ಮಾಷ್ಠಮಿ ಮಹೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿದವು. ಮುದ್ದು ಕೃಷ್ಣ ರಾಧೆಯರ ವೇಷಗಳೊಂದಿಗೆ ನಡೆದ ಶಾಸ್ತ್ರೀಯ ಶೋಭಾಯಾತ್ರೆ ಕಣ್ಮನ ತಣಿಸಿತು.
ಅಪರಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ಲಾವಣ್ಯ ಗಿರೀಶ್ ಪ್ರಾರ್ಥನೆ ಹಾಡಿದರು. ಕರ್ನಾಟಕದ ಜನಪ್ರಿಯ ಶಾಸಕಿ ನಯನಾ ಮೋಟಮ್ಮ ದೀಪಪ್ರಜ್ವಲನೆಗೈದು ಉದ್ಘಾಟಿಸಿದರು. ಬಾಬು ಮಾಸ್ಟರ್ ಅಗಲ್ಪಾಡಿ ಅಧ್ಯಕ್ಷತೆ ವಹಿಸಿದರು. ಕುಂಬ್ಡಾಜೆ ಪಂಚಾಯಿತಿ ಅಧ್ಯಕ್ಷೆ ಯಶೋಧ, ಜ್ಯೋತಿಷಿ ಕೃಷ್ಣಮೂರ್ತಿ ಪುದುಕೋಳಿ, ವಾಗ್ಮಿ ಗೋಪಾಲಕೃಷ್ಣ ವಾಂತಿಚ್ಚಾಲು, ಧಾರ್ಮಿಕ ಮುಂದಾಳುಗಳಾದ ರಮೇಶ್ ಆಳ್ವ ಕಡಾರು, ಸೂರ್ಯನಾರಾಯಣ ಸಂಪತ್ತಿಲ, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಬದಿಯಡ್ಕ ವಲಯ ಮೇಲ್ವಿಚಾರಕಿ ಸುಗುಣ ಹವಾಲ್ದಾರ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಬದಿಯಡ್ಕ ಖಂಡ್ ಸಂಘ ಚಾಲಕ್ ರಮೇಶ್ ಕಳೆರಿ, ಧಾರ್ಮಿಕ ಸಾಮಾಜಿಕ ಮುಂದಾಳು ಗಣೇಶ್ ಭಟ್ ಅಳಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು, ಡಾ. ವೇಣುಗೋಪಾಲ್ ಕಳೆಯತ್ತೋಡಿ, ಶ್ಯಾಮ ಆಳ್ವ ಕಡಾರು, ರಾಧಾಕೃಷ್ಣ ನಾಯರ್ ಪಾವೂರು, ಸುಧಾಮ ಪದ್ಮಾರ್, ಪ್ರಶಾಂತ್ ಮಾಸ್ತರ್ ಪ್ರಯಾರಾಗಂ ಜಯನಗರ ಉಪಸ್ಥಿತರಿದ್ದರು. ಪ್ರತಿಭಾ ಪುರಸ್ಕಾರ ಸ್ವೀಕಾರಕ್ಕಾಗಿ ವಿದ್ಯಾರ್ಥಿನಿಗಳಾದ ಶ್ರೀನಿಕಾ ವಿ, ಶರಣ್ಯ ಆರ್ ಎಸ್, ಯಶಸ್ವೀ ಪಿ, ಎಸ್ ಜಿ ಕೆ ಫ್ರೆಂಡ್ಸ್ ಗಲ್ಪ್ ಸಮಿತಿಯ ಅಧ್ಯಕ್ಷ ಸುರೇಶ್ ಪ್ರಸಾದ್ ಸುರಭಿ, ಧಾರ್ಮಿಕ ಚಿಂತಕಿ ಗೀತಾ ಯಂ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಉದಯ್ ಕುಮಾರ್ ಕಲ್ಲಕಟ್ಟ ವಂದಿಸಿದರು. ರಮೇಶ್ ಕೃಷ್ಣ ಪದ್ಮಾರು ಕಾರ್ಯಕ್ರಮ ನಿರೂಪಿಸಿದರು.

.jpg)
