ಉಪ್ಪಳ: ಮಂಗಲ್ಪಾಡಿ ಪ್ರತಾಪನಗರ ಶಿವಶಕ್ತಿ ಮೈದಾನದ ಶ್ರೀ ಗೌರೀ ಗಣೇಶ ಭಜನಾ ಮಂದಿರದಲ್ಲಿ ಜರಗುವ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವದ ಪ್ರಯುಕ್ತ ಮೂಡಂಬೈಲಿನ ವಾಗ್ದೇವೀ ಯಕ್ಷಗಾನ ಕಲಾಸಂಘದವರಿಂದ ಸೆಪ್ಟೆಂಬರ್ 14 ರಂದು ಪೂರ್ವಾಹ್ನ 10 ರಿಂದ "ಅತಿಕಾಯ ಮೋಕ್ಷ" ಎಂಬ ಕಥಾಭಾಗದ ಯಕ್ಷಗಾನ ತಾಳಮದ್ದಳೆ ಜರಗಲಿದೆ .ಹಿಮ್ಮೇಳದಲ್ಲಿ ಭಾಗವತರಾಗಿ ಶುಭಾನಂದ ಶೆಟ್ಟಿ ಕುಳೂರು, ಚೆಂಡೆ ಮತ್ತು ಮೃದಂಗದಲ್ಲಿ ಗಣಪತಿ ಭಟ್ ಪೆರ್ಲ ಹಾಗೂ ರಾಮದಾಸ್ ಶೆಟ್ಟಿ ವಗೆನಾಡು ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

